ಕರ್ನಾಟಕ

karnataka

ETV Bharat / international

ಇಂಡಿಯಾ ಗ್ಲೋಬಲ್ ವೀಕ್ ಶೃಂಗಸಭೆಯ ನೇತೃತ್ವ ವಹಿಸಲಿದೆ ಭಾರತ! - ಇಂಡಿಯಾ ಗ್ಲೋಬಲ್ ವೀಕ್ ಶೃಂಗಸಭೆಯ ನೇತೃತ್ವ ವಹಿಸಲಿರುವ ಸಚಿವ ಜೈ ಶಂಕರ್​

ಕೊರೊನಾ ಸಾಂಕ್ರಾಮಿಕದ ಬಳಿಕ ಜಗತ್ತಿನ ದೃಷ್ಟಿಕೋನದ ಕುರಿತು ಚರ್ಚಿಸುವ ಇಂಡಿಯಾ ಗ್ಲೋಬಲ್ ವೀಕ್ ಶೃಂಗಸಭೆಯ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ವಹಿಸಲಿದ್ದು, ಜುಲೈ 9 ಮತ್ತು 11 ರ ನಡುವೆ ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.

Jaishankar to headline India Global Week summit in UK
ವಿದೇಶಾಂಗ ಸಚಿವ ಜೈ ಶಂಕರ್​

By

Published : Jul 3, 2020, 8:49 AM IST

ಲಂಡನ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮುಂದಿನ ವಾರ ನಡೆಯಲಿರುವ ಕೊರೊನಾ ಸಾಂಕ್ರಾಮಿಕದ ಬಳಿಕ ಜಗತ್ತಿನ ದೃಷ್ಟಿಕೋನ ಎಂಬ ಇಂಡಿಯಾ ಗ್ಲೋಬಲ್ ವೀಕ್ ಶೃಂಗಸಭೆಯ ನೇತೃತ್ವ ವಹಿಸಲಿದ್ದು, ಇದು ಭಾರತದ ಜಾಗತೀಕರಣದ ಅತಿ ದೊಡ್ಡ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಒಂದಾಗಿದೆ.

#BeTheRevival 'ಭಾರತ ಮತ್ತು ಉತ್ತಮ ಹೊಸ ಪ್ರಪಂಚ' ಎಂಬ ಘೋಷವಾಕ್ಯದಡಿ ಜುಲೈ 9 ಮತ್ತು 11 ರ ನಡುವೆ ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಭಾರತವು ಜಗತ್ತಿಗೆ ನೀಡಬೇಕಾದ ವ್ಯಾಪಾರ, ಕಾರ್ಯತಂತ್ರ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕೋವಿಡ್​ -19 ನಿಂದ ಜಾಗತಿಕವಾಗಿ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸಲು ಒಂದು ವೇದಿಕೆಯಾಗಲಿದೆ.

ಯುಕೆ ಮೂಲದ ಮೀಡಿಯಾ ಹೌಸ್ ಇಂಡಿಯಾ ಐಎನ್​ಸಿ ಗ್ರೂಪ್ ಈ ವೆಬ್‌ನಾರ್‌ ಆಯೋಜಿಸುತ್ತಿದೆ. ಸಮಾವೇಶದಲ್ಲಿ ಜಿಯೋಪಾಲಿಟಿಕ್ಸ್, ವ್ಯವಹಾರ, ಸಂಸ್ಕೃತಿ ಮತ್ತು ಕಲೆ, ಉದಯೋನ್ಮುಖ ತಂತ್ರಜ್ಞಾನಗಳು, ಬ್ಯಾಂಕಿಂಗ್ ಮತ್ತು ಫೈನಾನ್ಸ್, ಫಾರ್ಮಾ, ರಕ್ಷಣಾ ಮತ್ತು ಭದ್ರತೆ, ಸಾಮಾಜಿಕ ಪರಿಣಾಮ ಮತ್ತು ಭಾರತೀಯ ವಲಸೆಗಾರರ ​​ಪ್ರಭಾವದ ಕುರಿತು ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯಾ ಐಎನ್​ಸಿ ಗ್ರೂಪ್‌ನ ಸ್ಥಾಪಕ ಮತ್ತು ಸಿಇಒ ಮನೋಜ್ ಲಾಡ್ವಾ, ಕೋವಿಡ್​ ಸಂದಿಗ್ದತೆಯಿಂದ ನಾವು ಹೊರ ಬರುತ್ತಿದ್ದಂತೆ ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಸಹಜ ಸ್ಥಿತಿಗೆ ತರಲು ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ನಾವು ಯೋಚಿಸೋಣ ಎಂದು ಹೇಳಿದ್ದಾರೆ. ಕೊರೊನಾ ವೈರಸ್​ ಹಿನ್ನೆಲೆ ಸಮಾವೇಶವು ವರ್ಚುವಲ್ ಆಗಿ ನಡೆಯಲಿದೆ.

ಸಮಾವೇಶದಲ್ಲಿ ಸಚಿವ ಜೈಶಂಕರ್ ಜೊತೆ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಇತ್ತೀಚೆಗೆ ವಿಶ್ವಸಂಸ್ಥೆಯಿಂದ ನಿವೃತ್ತರಾದ ಭಾರತೀಯ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮತ್ತು ಲೇಖಕ - ರಾಜಕಾರಣಿ ಶಶಿ ತರೂರ್ ಭಾಗವಹಿಸಲಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್​ನ ದಂತಕಥೆ ಸ್ಟೀವ್ ವಾ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ರವಿಶಂಕರ್ ಗುರೂಜಿ ಸೇರಿದಂತೆ ಸುಮಾರು 250 ಮಂದಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಸುಮಾರು 75 ವಿವಿಧ ಗೋಷ್ಠಿಗಳು ನಡೆಯಲಿವೆ, 5 ಸಾವಿರದಷ್ಟು ಮಂದಿ ಭಾಗವಹಿಸಲಿದ್ದಾರೆ.

ABOUT THE AUTHOR

...view details