ಲಂಡನ್: ಯಾರಾದರೂ ನಿಮ್ಮ ಸುತ್ತ ಹೊಟ್ಟೆ ಸರಿ ಇಲ್ಲ ಅಂತಾ ಡರ್‌ರ್ ಎಂದು ಗ್ಯಾಸ್ ಬಿಟ್ಟರೆ ಕೇವಲ ಮೂಗು ಮುಚ್ಚಿಕೊಂಡು ಸುಮ್ಮನಾಗುತ್ತೀರಿ ಅಲ್ಲವೇ.. ಆದ್ರೆ ಈ ವರದಿ ನೋಡಿದ ಮೇಲೆ ನೀವು ನಿಮ್ಮ ಆಲೋಚನೆಯನ್ನೇ ಬದಲು ಮಾಡಿಕೊಳ್ಳುತ್ತೀರಾ. ಕಾರಣ, ಬಿಡುವ ಗ್ಯಾಸ್ನಿಂದಲೂ ಕೊರೊನಾ ಹರಡುತ್ತದಂತೆ.
ಹೌದು, ಹೂಸು ಬಿಟ್ಟರೆ ಕೊರೊನಾ ಸಾರ್ವಜನಿಕವಾಗಿ ಹರಡುತ್ತದೆ ಎಂಬುದಕ್ಕೆ ಪುರಾವೆಗಳನ್ನು ನೋಡಿದ್ದೇವೆ ಎಂದು ಯುನೈಟೆಡ್ ಕಿಂಗ್‌ಡಂನ ಮಂತ್ರಿಗಳು ಹೇಳಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಇತರ ದೇಶಗಳ ದತ್ತಾಂಶಗಳ ಬಗ್ಗೆ ಉಲ್ಲೇಖಿಸಿ, ವಿಶ್ವಾಸಾರ್ಹವಾಗಿ ಕಾಣುವ ವಿಷಯವನ್ನು ಓದಿದ್ದಾರೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಆಸ್ಟ್ರೇಲಿಯಾದ ಕ್ಯುಬಿಕಲ್ [ಶೌಚಾಲಯ] ನಿಂದ ಇಬ್ಬರು ವ್ಯಕ್ತಿಗಳ ನಡುವೆ ಜೀನೋಮಿಕಲ್-ಲಿಂಕ್ಡ್ ಟ್ರೇಸಿಂಗ್ ಸಂಪರ್ಕದ ಪುರಾವೆಗಳಿವೆ ಎಂದು ಮೂಲ ಹೇಳಿದೆ. ಹಾಗೆಯೇ ಲಾಕ್‌ಡೌನ್ ಸಮಯದಲ್ಲಿ ತ್ಯಾಜ್ಯ ಕೊಳವೆಗಳ ಮೂಲಕ ರೋಗಗಳು ಹರಡಿರುವುದರ ಬಗ್ಗೆ ದಾಖಲೆ ಇವೆ ಎಂದು ಹೇಳಿದ್ದಾರೆ.
ಒಬ್ಬ ಮಂತ್ರಿ ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ್ದು, ಕೋವಿಡ್ ಒಂದು ಉಸಿರಾಟದ ಕಾಯಿಲೆ, ಇದು ಹೆಚ್ಚಾಗಿ ಬಾಯಿಯ ಮೂಲಕ ಮತ್ತು ಮೂಗಿನಿಂದ ಹರಡುತ್ತದೆ ಎಂದಿದ್ದಾರೆ. ಈ ಸಂಬಂಧ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಪ್ರತಿಕ್ರಿಯಿಸಿ, ಅಂತಹ ಮಾಹಿತಿ ಬಗ್ಗೆ ತಿಳಿದಿಲ್ಲ. ನಾವು ಇತ್ತೀಚಿನ ವೈಜ್ಞಾನಿಕ ಪುರಾವೆ ಬಗ್ಗೆ ಪರಿಶೀಲನೆಯನ್ನು ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಡಾ.ಆಂಡಿ ಟ್ಯಾಗ್ ಈ ಸಂಬಂಧ ಪ್ರತಿಕ್ರಿಯಿಸಿ, SARS-CoV-2 ಅನ್ನು ಮಲದಲ್ಲಿ ಪತ್ತೆ ಮಾಡಬಹುದು ಮತ್ತು ರೋಗಲಕ್ಷಣವಿಲ್ಲದ ವ್ಯಕ್ತಿಯಲ್ಲಿ 17 ದಿನಗಳ ನಂತರ ಇದು ಪತ್ತೆಯಾಗುತ್ತದೆ. ಬಹುಶಃ SARS-CoV-2 ಪಾರ್ಟಿಂಗ್ ಮೂಲಕವೂ ಮೂಲಕವೂ ಹರಡಬಹುದು ಆದರೆ, ಇದರ ಬಗ್ಗೆ ನಮಗೆ ಹೆಚ್ಚಿನ ಪುರಾವೆಗಳು ಬೇಕಾಗುತ್ತವೆ. ಆದ್ದರಿಂದ ಎಲ್ಲಾ ಸಮಯದಲ್ಲೂ ಸೂಕ್ತವಾದ ಪಿಪಿಇ ಧರಿಸಲು ಮತ್ತು ಸುರಕ್ಷಿತವಾಗಿರಲು ಮರೆಯದಿರಿ ಎಂದು ಸಲಹೆ ನೀಡಿದ್ದಾರೆ.
ಕೋವಿಡ್‌ಗೆ ಕಾರಣವಾಗುವ SARS-COV-2 ಎಂಬ ವೈರಸ್ ಸೋಂಕಿತ ರೋಗಿಗಳ ಮಲದಲ್ಲಿ ಕಂಡುಬಂದಿದೆ. ಆದಾಗ್ಯೂ, ಫಾರ್ಟಿಂಗ್(ಹೂಸು) ಮೂಲಕ ಪ್ರಸರಣ ಸಾಧ್ಯವೇ ಎಂದು ಇನ್ನೂ ಖಚಿತಪಡಿಸಲಾಗಿಲ್ಲ.