ಕರ್ನಾಟಕ

karnataka

ETV Bharat / international

ಉತ್ತರಾಧಿಕಾರಿಗೆ ಬೆಂಬಲ ಸೂಚಿಸಿದ ಇಟಲಿ ನಿರ್ಗಮಿತ ಪ್ರಧಾನಿ ಕಾಂಟೆ - ಮರಿಯೋ ದ್ರಾಘಿ

ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಬಲ್ಲ ಹೊಸ ಸರ್ಕಾರ ರಚನೆಯಾಗಬಹುದು ಎಂದು ಇಟಲಿ ನಿರ್ಗಮಿತ ಪ್ರಧಾನಿ ಗೈಸೆಪೆ ಕಾಂಟೆ ಹೇಳಿದ್ದಾರೆ.

Italy's outgoing PM Conte signals support for successor
ಗೈಸೆಪೆ ಕಾಂಟೆ

By

Published : Feb 5, 2021, 5:21 PM IST

ರೋಮ್: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುತ್ತಿರುವ ಇಟಲಿ ನಿರ್ಗಮಿತ ಪಿಎಂ ಗೈಸೆಪೆ ಕಾಂಟೆ ಅವರು ಪ್ರಧಾನಿ - ನಿಯೋಜಿತ ಮರಿಯೋ ದ್ರಾಘಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ವಿಶ್ವಾಸಾರ್ಹ ಮತಯಾಚನೆ ವೇಳೆ 161 ಸೆನೆಟರ್‌ಗಳ ಸಂಪೂರ್ಣ ಬಹುಮತ ಪಡೆಯುವಲ್ಲಿ ಇಟಲಿ ಪ್ರಧಾನಿ ಗೈಸೆಪೆ ಕಾಂಟೆ ವಿಫಲರಾಗಿದ್ದರು. ವ್ಯಾಪಕ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸುವ ಸಲುವಾಗಿ ಜನವರಿ 26 ರಂದು ಕಾಂಟೆ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡುವ ಒಂದು ದಿನದ ಮುನ್ನ ಮರಿಯೋ ದ್ರಾಘಿಯನ್ನು ನಾನು ಭೇಟಿಯಾಗಿ ದೀರ್ಘ ಹಾಗೂ ಮುಕ್ತ ಮಾತುಕತೆ ನಡೆಸಿರುವುದಾಗಿ ಗೈಸೆಪೆ ಕಾಂಟೆ ಇದೀಗ ಹೇಳಿದ್ದು, ಹೊಸ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಉಚ್ಛಾಟನೆಯ ಎಚ್ಚರಿಕೆ ಬಳಿಕ ಸ್ಕ್ರೀನ್ ಆ್ಯಕ್ಟರ್ಸ್​ ಗಿಲ್ಡ್ ತೊರೆದ ಟ್ರಂಪ್

ಹೊಸ ಸರ್ಕಾರ ರಚನೆಗೆ ನಾನು ಅಡ್ಡಿಯಾಗಿದ್ದೇನೆ ಎಂದು ಹೇಳುವವರಿಗೆ ನನ್ನ ಬಗ್ಗೆ ತಿಳಿದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವಾಗಲೂ ಸೇವೆ ಸಲ್ಲಿಸಿದ್ದೇನೆ ಮತ್ತು ನಿರಂತರವಾಗಿ ಸಲ್ಲಿಸುತ್ತೇನೆ. ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ತುರ್ತು ಪರಿಸ್ಥಿತಿಗಳನ್ನು (ಕೊರೊನಾ ಪರಿಸ್ಥಿತಿ) ನಿಭಾಯಿಸಬಲ್ಲ ಹೊಸ ಸರ್ಕಾರ ರಚನೆಯಾಗಬಹುದು ಎಂದು ಕಾಂಟೆ ಹೇಳಿದ್ದಾರೆ.

ABOUT THE AUTHOR

...view details