ಕರ್ನಾಟಕ

karnataka

ETV Bharat / international

ಕೊರೊನಾ ಎಫೆಕ್ಟ್​: ಮಕಾಡೆ ಮಲಗಿದ ಇಟಲಿ ಆರ್ಥಿಕತೆ - ಆರ್ಥಿಕ ಬಿಕ್ಕಟ್ಟು ಸುಧಾರಿಸಲು ನೌಕರರ ತೆರಿಗೆ ಕಡಿತಕ್ಕೆ ಮುಂದಾದ ಇಟಲಿ

ಈಗಾಗಲೇ ಆರ್ಥಿಕವಾಗಿ ಮಕಾಡೆ ಮಲಗಿರುವ ಇಟಲಿ ಏಪ್ರಿಲ್​ ಮತ್ತು ಜೂನ್​ನಲ್ಲಿ ಅಲ್ಲಿನ ಜಿಡಿಪಿ ಶೇ 1.0ರಷ್ಟು ಕುಗ್ಗುವ ಸಾಧ್ಯೆತೆ ಇದೆ ಎಂದು ಅಂದಾಜಿಸಲಾಗಿದೆ.

ಕೊರೊನಾ
Coronavirus

By

Published : Mar 11, 2020, 10:15 AM IST

ರೋಮ್​: ಕೊರೊನಾದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಇಟಲಿ ಸರ್ಕಾರ ತನ್ನ ನೌಕರರ ವೇತನ ತೆರಿಗೆಯನ್ನು ಕಡಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ.

ಇಟಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರವಾಸೋದ್ಯಮ ಕುಸಿತದಿಂದಾಗಿ ಅನೇಕ ವ್ಯವಾಹರಗಳು ತೊಂದರೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು 10 ಬಿಲಿಯನ್​ ಯುರೋ ಸಹಾಯ ನೀಡಲು ಯುರೋಪಿಯನ್​ ಒಕ್ಕೂಟಕ್ಕೆ ಮನವಿ ಮಾಡಿರುವುದಾಗಿ ಆರ್ಥಿಕ ಸಚಿವರು ಹೇಳಿದ್ದಾರೆ. ಈ ಬಗ್ಗೆ ಇಂದು ಸಭೆ ನಡೆಯಲಿದ್ದು, ಸಭೆಯಲ್ಲಿ ಸರ್ಕಾರ ಗೃಹ ಕೈಗಾರಿಕೆ ಮತ್ತು ಸಣ್ಣ ವ್ಯಾಪಾರಗಳಿಗೆ ಔಪಚಾರಿಕವಾಗಿ ಬೆಂಬಲ ಸೂಚಿಸುವ ನಿರೀಕ್ಷೆಯಿದೆ.

ಕರೋನಾ ವೈರಸ್​ ಹಾವಳಿಯಿಂದ ಉಂಟಾದ ಬಿಕ್ಕಟ್ಟು ಹಾಗೂ ಅದನ್ನು ನಿವಾರಣೆ ದೃಷ್ಟಿಯಿಂದ ನೌಕರರ ಸಂಬಳದಲ್ಲಿ ತೆರಿಗೆ ರೂಪದಲ್ಲಿ ಹಿಡಿದುಕೊಳ್ಳುತ್ತಿದ್ದ ನೀತಿಯನ್ನ ಕೈಬಿಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಇಟಲಿಯ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ 2008-09ರ ಆರ್ಥಿಕ ಹಿಂಜರಿತದಂತೆಯೇ, ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಇದ್ದು ಈ ಹಂತದಲ್ಲಿ ಇದರ ವ್ಯಾಪ್ತಿಯನ್ನು ಅಳೆಯುವುದು ತುಂಬಾ ಕಷ್ಟ ಎಂದು ಅಲ್ಲಿನ ಅರ್ಥಶಾಸ್ತ್ರಜ್ಞರು ತಮ್ಮ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಇಟಲಿಯ ಆರ್ಥಿಕ ಬಿಕ್ಕಟ್ಟು ಪರಿಹರಿಸಲು 7.5 ಬಿಲಿಯನ್ ಯೂರೋ ಹಣವೂ​ ಸಾಕಾಗುತ್ತಿಲ್ಲ. ಇದರ ಖರ್ಚನ್ನು ಸುಮಾರು 10 ಬಿಲಿಯನ್​ ಯುರೋಗಳಷ್ಟು ಹೆಚ್ಚಿಸಲು ರೋಮ್​ ಕಾರ್ಯನಿರ್ವಹಿಸುತ್ತಿದೆ ಎಂದು ಆರ್ಥಿಕ ಅಭಿವೃದ್ದಿ ಸಚಿವ ಸ್ಟೆಫಾನೊ ಪೆಟುನಲ್ಲಿ ರೆಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.

ಕೇವಲ ಎರಡೇ ವಾರದಲ್ಲಿ ಮೆಡಿಟರೇನಿಯನ್​ ದೇಶದಲ್ಲಿ 9,000 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಇದರಿಂದ ಇಟಲಿ ಸರ್ಕಾರ ತಾತಾಲ್ಕಿಕವಾಗಿ ಸಾರ್ವಜನಿಕರ ಪ್ರಯಾಣವನ್ನು ನಿರ್ಬಂಧಿಸಿ, ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಿದೆ.

ABOUT THE AUTHOR

...view details