ರೋಮ್:ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಬಂದ್ ಮಾಡಿದ್ದರೂ ವೈರಸ್ಗೆ ಬಲಿಯಾಗುತ್ತಿರುವ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಇಟಲಿ ದೇಶ ಕಂಗಾಲಾಗಿದೆ.
ಸಾಕಷ್ಟು ಮುಂಜಾಗೃತಾ ಕ್ರಮಗಳ ಹೊರತಾಗಿಯೂ ಇಟಲಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಮತ್ತು ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಶುಕ್ರವಾರ ಒಂದೇ ದಿನ ಈ ರಾಷ್ಟ್ರದಲ್ಲಿ 2,547 ಜನರಿಗೆ ಸೋಂಕು ತಗುಲಿದ್ದು, ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ.