ಟೆಲ್ ಅವೀವ್(ಇಸ್ರೇಲ್):ಇಸ್ರೇಲ್ಗೆ ಹೊಸ ಪ್ರಧಾನಿ ನೇಮಕವಾಗಿದೆ. ಹೊಸ ಬೆಳವಣಿಗೆ ಎಂಬಂತೆ ತಿಂಗಳ ಹಿಂದಷ್ಟೇ ಪ್ಯಾಲಸ್ತೀನ್ನೊಂದಿಗೆ ಕದನ ವಿರಾಮ ಒಪ್ಪಂದವನ್ನು ಮುರಿಯಲಾಗಿದೆ. ಇಸ್ರೇಲಿ ವಾಯುಪಡೆಯು ಬುಧವಾರ ಗಾಜಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿತು.
ಇಸ್ರೇಲ್ ಮತ್ತು ಪ್ಯಾಲಸ್ತೀನ್ ನಡುವೆ ನಡೆದ ಸುಮಾರು 11 ದಿನಗಳ ಸಂಘರ್ಷದ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಕದನ ವಿರಾಮದ ನಂತರ ಇದೇ ಮೊದಲ ಬಾರಿಗೆ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ದಾಳಿ ನಡೆದಿದೆ.
ಹಮಾಸ್ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ. ಎಲ್ಲಾ ಸನ್ನಿವೇಶಗಳಿಗೂ ನಾವು ಸಿದ್ಧರಿರುತ್ತೇವೆ. ಗಾಜಾದಿಂದ ಉಗ್ರರನ್ನು ಹೊರಹಾಕುವವರೆಗೆ ಇದು ಮುಂದುವರೆಯುತ್ತದೆ ಎಂದು ಸೇನೆ ಮಾಹಿತಿ ನೀಡಿದೆ ಎಂದು ಅಲ್ ಜಜೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಚೀನಾ 'ಪ್ರೇಮ' ಬದಿಗಿಟ್ಟು, ಮಿಲಿಟರಿ, ಆರ್ಥಿಕ ಕ್ರಮ ಕೈಗೊಳ್ಳಿ: ಮೋದಿಗೆ ಕಾಂಗ್ರೆಸ್ ಒತ್ತಾಯ
ಹೊಸ ಸರ್ಕಾರ ಇಸ್ರೇಲ್ನಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, ಬೆಂಜಮಿನ್ ನೆತನ್ಯಾಹು ಜಾಗಕ್ಕೆ ನಫ್ತಾಲಿ ಬೆನೆಟ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಮಾಸ್ಗೆ ಈ ಸರ್ಕಾರದಿಂದಲೂ ಎಚ್ಚರಿಕೆ ನೀಡಲಾಗುತ್ತಿದೆ ಮಿಸೈಲ್ ದಾಳಿ ಮೂಲಕ ಸೂಚಿಸಲಾಗುತ್ತಿದೆ ಎನ್ನಲಾಗಿದೆ. ಇನ್ನು ಸ್ಪುತ್ನಿಕ್ ವರದಿ ಮಾಡಿರುವಂತೆ ಮಿಸೈಲ್ಗಳನ್ನು ಗಾಜಾ ನಗರ ಮತ್ತು ಖಾನ್ ಯೂನಿಸ್ ನಗರವನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ.
ಸ್ಫೋಟಕ ತುಂಬಿದ ಬಲೂನ್ ದಾಳಿಗೆ ಪ್ರತ್ಯುತ್ತರ
ಇದಕ್ಕೂ ಮೊದಲು ಇಸ್ರೇಲ್ ಸೇನಾ ವಕ್ತಾರ ಹೇಳುವಂತೆ ಗಾಜಾ ಪಟ್ಟಿಯಿಂದ ಕೆಲವೊಂದು ಸ್ಫೋಟಕ ತುಂಬಿದ ಬಲೂನ್ಗಳನ್ನು ಇಸ್ರೇಲ್ನತ್ತ ಹಾರಿ ಬಿಡಲಾಗಿತ್ತು. ಸೇನೆ ಅದನ್ನು ತಡೆದಿತ್ತು ಎಂದು ಮಾಹಿತಿ ನೀಡಿದ್ದಾರೆ.