ಕರ್ನಾಟಕ

karnataka

ETV Bharat / international

'ಬುಕರ್​ ಪ್ರೈಜ್' ನಾಮಿನೇಷನ್​: ಕಜುವೊ ಇಶಿಗುರೊ, ರಿಚರ್ಡ್ ಪವರ್ಸ್ ಸೇರಿ 13 ಲೇಖಕಕರ ನಾಮ ನಿರ್ದೇಶನ - Nobel laureate Kazuo Ishiguro

ಪ್ರತಿಷ್ಟಿತ 'ಬುಕರ್ ಪ್ರೈಜ್​'ನ ನಾಮಿನೇಷನ್​ ಪಟ್ಟಿ ಬಿಡುಗಡೆಗೊಂಡಿದ್ದು, ನೊಬೆಲ್ ಪ್ರಶಸ್ತಿ ವಿಜೇತ ಕಜುವೊ ಇಶಿಗುರೊ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಸೇರಿ 13 ಲೇಖಕಕರ ಹೆಸರು ಉಲ್ಲೇಖವಾಗಿದೆ.

Ishiguro
ಕಜುವೊ ಇಶಿಗುರೊ

By

Published : Jul 27, 2021, 7:06 AM IST

ಲಂಡನ್: ನೊಬೆಲ್ ಪ್ರಶಸ್ತಿ ವಿಜೇತ ಕಜುವೊ ಇಶಿಗುರೊ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಅವರು ಪ್ರತಿಷ್ಟಿತ 'ಬುಕರ್ ಪ್ರೈಜ್​'ನ ನಾಮಿನೇಷನ್​ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 13 ಲೇಖಕಕರ ಹೆಸರು ಉಲ್ಲೇಖವಾಗಿದೆ.

2017ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ಗೆದ್ದ ಬ್ರಿಟನ್‌ನ ಇಶಿಗುರೊ, ತನ್ನ "ಕ್ಲಾರಾ ಆ್ಯಂಡ್​ ದಿ ಸನ್​" ಎಂಬ ಪುಸ್ತಕದಿಂದ ಈ ನಾಮಿನೇಷನ್​ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಈ ಪುಸ್ತಕವು ಸೌರಶಕ್ತಿ ಚಾಲಿತ ಆಂಡ್ರಾಯ್ಡ್ ನಿರೂಪಿಸುವ ಪ್ರೀತಿ ಮತ್ತು ಮಾನವೀಯತೆಯ ಕಾದಂಬರಿಯಾಗಿದೆ. 1989ರಲ್ಲಿ 'ದಿ ರಿಮೇನ್ಸ್ ಆಫ್ ದಿ ಡೇ' ಪುಸ್ತಕದಿಂದ ಬಹುಮಾನವನ್ನು ಗೆದ್ದ ಇಶಿಗುರೊಗೆ ಇದು ನಾಲ್ಕನೇ ನಾಮನಿರ್ದೇಶನವಾಗಿದೆ.

ಇನ್ನು ಅಮೆರಿಕನ್ ಲೇಖಕ ರಿಚರ್ಡ್ ಪವರ್ಸ್ ಎಂಬವರು ತನ್ನ 'ಬಿವೈಲ್ಡರ್​ಮೆಂಟ್​' ಎಂಬ ಪುಸ್ತಕದಿಂದ ನಾಮ ನಿರ್ದೇಶನಗೊಂಡಿದ್ದಾರೆ. ಈ ಪುಸ್ತಕವು ಖಗೋಳವಿಜ್ಞಾನಿ ಮತ್ತು ನರರೋಗ ತಜ್ಞ ಮಗನ ಬಗ್ಗೆ ಬರೆದಿರುವ ಕಾದಂಬರಿಯಾಗಿದೆ. ಇನ್ನು ಪರಿಸರಕ್ಕೆ ಸಂಬಂಧಿಸಿದ ಲೇಖನ ಬರೆದಿದ್ದಕ್ಕಾಗಿ ಅವರಿಗೆ 2019 ರಲ್ಲಿ ಪುಲಿಟ್ಜೆರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನು ನಾಮನಿರ್ದೇಶನಗೊಂಡ ಎಲ್ಲ ಪುಸ್ತಕಗಳು ಸಮುದಾಯದ ಸ್ವರೂಪದ ಬಗ್ಗೆ ಹೇಳುತ್ತದೆ. ಆರು ಪುಸ್ತಕಗಳ ಕಿರುಪಟ್ಟಿಯನ್ನು ಸೆಪ್ಟೆಂಬರ್ 14 ರಂದು ಘೋಷಿಸಿ, ಬಳಿಕ ನವೆಂಬರ್​ 3ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.

ABOUT THE AUTHOR

...view details