ಲಂಡನ್:ಜಗತ್ತಿನೆಲ್ಲೆಡೆಐದನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವ ವೇಳೆಯಲ್ಲೇ 2022ರ ವಿಶ್ವ ಯೋಗ ದಿನಾಚರಣೆಯನ್ನು ಲಂಡನ್‌ನ ಲ್ಯಾಂಬೆತ್ ನಗರದಲ್ಲಿರುವ ಬಸವೇಶ್ವರರ ಪ್ರತಿಮೆಯ ಮುಂಭಾಗದಲ್ಲಿ ಆಯೋಜಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಮೋದಿಗೂ ಬಸವೇಶ್ವರ ಪ್ರತಿಮೆಗೂ ವಿಶೇಷ ನಂಟು: ಥೇಮ್ಸ್ ದಂಡೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆ? - ಡಾ.ನೀರಜ್ ಪಾಟೀಲ್
ಪ್ರಧಾನಿ ಮೋದಿ 2015ರ ನವೆಂಬರ್ 14ರಂದು ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ಪ್ರತಿಮೆಯನ್ನು ಅನಾವರಣ ಮಾಡಿದ್ದರು.
![ಮೋದಿಗೂ ಬಸವೇಶ್ವರ ಪ್ರತಿಮೆಗೂ ವಿಶೇಷ ನಂಟು: ಥೇಮ್ಸ್ ದಂಡೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆ?](https://etvbharatimages.akamaized.net/etvbharat/prod-images/768-512-3625326-thumbnail-3x2-ks.jpg)
ವಿಶ್ವ ಯೋಗ ದಿನವಾದ ಇಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆಯೋಜನೆ ಮಾಡಿದ್ದ ಯೋಗ ದಿನಾಚರಣೆಯಲ್ಲಿ ಲಂಡನ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ 2022ರ ವಿಶ್ವ ಯೋಗ ದಿನಾಚರಣೆಯನ್ನು ಬಸವೇಶ್ವರರ ಪ್ರತಿಮೆ ಮುಂಭಾಗದಲ್ಲಿ ಆಯೋಜನೆ ಮಾಡಬೇಕು ಎಂದು ಲಂಡನ್ ಭಾರತೀಯರ ಪರವಾಗಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ 2015ರ ನವೆಂಬರ್ 14ರಂದು ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಈ ವಿಶೇಷ ಸಂಬಂಧದ ಹಿನ್ನೆಲೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆಯನ್ನು ಇದೇ ಬಸವೇಶ್ವರರ ಪ್ರತಿಮೆ ಮುಂದೆ ಆಯೋಜಿಸುವಂತೆ ನೀರಜ್ ಪಾಟೀಲ್ ಮನವಿ ಸಲ್ಲಿದ್ದಾರೆ.