ಲಂಡನ್:ಇಂಗ್ಲೆಂಡ್ನ ಹಣಕಾಸು ಇಲಾಖೆ ಮಂತ್ರಿ ಸ್ಥಾನಕ್ಕೆ ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಬಳಿಕ, ಈ ಸ್ಥಾನಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ನೇಮಕವಾಗಿದ್ದಾರೆ.
ಇವರು 2015ರಲ್ಲಿ ರಿಚ್ಮಂಡ್ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸೌತ್ ಆ್ಯಂಪ್ಟನ್ ಹ್ಯಾಂಮ್ಶೀಯರ್ನಲ್ಲಿ ಸುನಾಕ್ ಜನಿಸಿದ್ದು, ಆಕ್ಸ್ ಫೋರ್ಡ್ ವಿವಿಯಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರ, ಹಾಗೂ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನಂತರ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದರು.