ಕರ್ನಾಟಕ

karnataka

ETV Bharat / international

ಸೆಲ್ಫಿ ಮಾರಾಟ ಮಾಡಿ ಕೋಟ್ಯಧೀಶನಾದ ವಿದ್ಯಾರ್ಥಿ.. ಐದು ವರ್ಷದಲ್ಲಿ ಈತ ಗಳಿಸಿದ್ದೆಷ್ಟು ಗೊತ್ತಾ!? - ಇಂಡೋನೇಷ್ಯಾದ ಸುಲ್ತಾನ್ ಗುಸ್ತಾಫ್ ಅಲ್

Indonesian student became a millionaire: ಇಂಡೋನೇಷ್ಯಾದ ವಿದ್ಯಾರ್ಥಿಯೋರ್ವ ಎನ್​​ಎಫ್​ಟಿಯಲ್ಲಿ ಸೆಲ್ಫಿ ಅಪ್​ಲೋಡ್ ಮಾಡುವ ಮೂಲಕ ಅವುಗಳಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾನೆ.

Indonesian student became a millionaire
Indonesian student became a millionaire

By

Published : Jan 24, 2022, 7:18 PM IST

ಜಕಾರ್ತ(ಇಂಡೋನೇಷ್ಯಾ):ಹಣ ಗಳಿಸಲು ಹತ್ತಾರು ಹಾದಿಗಳಿವೆ. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ಫೇಮಸ್​​ ಆಗುತ್ತಿದ್ದಂತೆ ಲಕ್ಷಾಂತರ ಜನರು ಇದರಿಂದಲೇ ಹಣ ಗಳಿಕೆ ಮಾಡ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯೂಟ್ಯೂಬ್​, ಇನ್​​ಸ್ಟಾಗ್ರಾಂ ಮುಖ್ಯವಾಗಿವೆ. ಇದರ ಮಧ್ಯೆ, ಇಂಡೋನೇಷ್ಯಾದ ವಿದ್ಯಾರ್ಥಿಯೋರ್ವ ಕಳೆದ ಐದು ವರ್ಷಗಳಲ್ಲಿ ಆನ್​ಲೈನ್​ ಮೂಲಕ ಸೆಲ್ಫಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದ್ದಾನೆ.

ಇಂಡೋನೇಷ್ಯಾದ ಸುಲ್ತಾನ್ ಗುಸ್ತಾಫ್ ಅಲ್(22) ಕಂಪ್ಯೂಟರ್ ಸೈನ್ಸ್​​ ವಿದ್ಯಾರ್ಥಿಯಾಗಿದ್ದು, ಕಳೆದ ಐದು ವರ್ಷಗಳಿಂದ ಸೆಲ್ಫಿ ತೆಗೆದುಕೊಂಡು ಅವುಗಳನ್ನ ಎನ್​​ಎಫ್​ಟಿಗಳಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದಾನೆ. ಯಾವುದೇ ರೀತಿಯ ಭಾವರಹಿತ(expressionless) ಸೆಲ್ಫಿ ಫೋಟೋ ತೆಗೆದುಕೊಂಡು ಇಲ್ಲಿಯವರೆಗೆ ಸಾವಿರಾರು ಸೆಲ್ಫಿ ಮಾರಾಟ ಮಾಡಿದ್ದಾನೆ. ಆರಂಭದಲ್ಲಿ ಈ ಪೋಟೋಗಳನ್ನ ತಮಾಷೆಗೋಸ್ಕರ ಎನ್​ಎಫ್​ಟಿಯಲ್ಲಿ ಹಾಕಿಕೊಂಡಿದ್ದರಂತೆ. ಆದರೆ, ಒಂದೇ ದಿನ 35 ಫೋಟೋ ಖರೀದಿಯಾಗಿದ್ದು, ಇದಾದ ಬಳಿಕ ಇವರ ಫೋಟೋಗಳಿಗೆ ಇನ್ನಿಲ್ಲದ ಬೇಡಿಕೆ ಬರಲು ಶುರುವಾಗಿವೆ. ಇದಾದ ನಂತರ ಪ್ರತಿದಿನ ನೂರಾರು ಸೆಲ್ಫಿ ಫೋಟೋ ಮಾರಾಟವಾಗಿವೆ.

ಇದನ್ನೂ ಓದಿರಿ:ರಶ್ಮಿಕಾ ಮಂದಣ್ಣ ಹೊಸ ಅವತಾರ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು!

ಎನ್​​ಎಫ್​​ಟಿ ಎಂಬುದು ಫೋಟೋಗಳ ನೈಜ ಮಾಲೀಕತ್ವ ಪ್ರತಿನಿಧಿಸುವ ವಿಶಿಷ್ಟ ಡಿಜಿಟಲ್​​ ತಂತ್ರಾಂಶವಾಗಿದ್ದು, ಆರಂಭದಲ್ಲಿ ತನ್ನ ಕಾಲೇಜ್​ ದಿನಗಳನ್ನ ನೆನಪಿನಲ್ಲಿಟ್ಟುಕೊಳ್ಳಲು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ವಿದ್ಯಾರ್ಥಿ ನಂತರ ಅವುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾನೆ. ಇದರಿಂದಲೇ ಕಳೆದ ಐದು ವರ್ಷಗಳಲ್ಲಿ ಕೋಟ್ಯಧಿಪತಿಯಾಗಿದ್ದಾನೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸುಲ್ತಾನ್, ತಾವು ಅಪ್​​ಲೋಡ್ ಮಾಡುವ ಸೆಲ್ಫಿ ಫೋಟೋ ಖರೀದಿ ಮಾಡುತ್ತಾರೆಂದು ಎಂದಿಗೂ ಯೋಚನೆ ಮಾಡಿರಲಿಲ್ಲ. ಎನ್​ಎಫ್​ಟಿಯಲ್ಲಿ ಅಪ್​ಲೋಡ್ ಮಾಡಿರುವ ಫೋಟೋಗಳನ್ನ ದುರುಪಯೋಗ ಮಾಡಿಕೊಳ್ಳದಂತೆ ಮನವಿ ಸಹ ಮಾಡಿದ್ದಾರೆ.

ಸೆಲ್ಫಿ ಫೋಟೋಗಳಿಂದ ಇಲ್ಲಿಯವರೆಗೆ ವಿದ್ಯಾರ್ಥಿ 7.73 ಕೋಟಿ ರೂ. ಸಂಪಾದನೆ ಮಾಡಿದ್ದು, ಪ್ರತಿವೊಂದು ಫೋಟೋ 2.22 ಲಕ್ಷ ರೂ.ಗೆ ಮಾರಾಟವಾಗುತ್ತಿವೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details