ಮೋಂಟ್ -ಡೆ- ಮರ್ಸಾನ್: ಭಾರಿ ಚರ್ಚೆಗೆ ಕಾರಣವಾಗಿದ್ದ ರಫೇಲ್ ಜೆಟ್ಗಳನ್ನು ಚಲಾಯಿಸಿದ ಭಾರತೀಯ ಪೈಲಟ್ಗಳು ಅದ್ಭುತ ಎಂಬುದಾಗಿ ಉದ್ಘರಿಸಿದ್ದಾರೆ ಎಂದು ಫ್ರೆಂಚ್ ವಾಯುಪಡೆಯ ಸಿಬ್ಬಂದಿ ಮುಖ್ಯಸ್ಥ ಜನರಲ್ ಫಿಲಿಪ್ಪೆ ಲವಿಗ್ನೆ ಹೇಳಿದ್ದಾರೆ.
ರಫೇಲ್ ಜೆಟ್ ಅದ್ಭುತ ಅಂದ್ರು ಭಾರತೀಯ ಪೈಲಟ್ಸ್: ಜನರಲ್ ಫಿಲಿಪ್ಪೆ ಲವಿಗ್ನೆ ಸಂತಸ - undefined
ರಫೆಲ್ ಜೆಟ್ ಚಲಾಯಿಸಿದ ಅನುಭವ ಅದ್ಭುತವಾದುದು ಎಂದು ಭಾರತೀಯ ವಾಯುಪಡೆಯ ಪೈಲಟ್ಗಳು ಹೇಳಿದ್ದಾರೆ. 2-3 ಮೂರು ಜೆಟ್ಗಳನ್ನು ಅವರು ಆರಾಮಾಗಿ ಚಲಾಯಿಸಿದರು ಎಂದು ಫ್ರೆಂಚ್ ವಾಯುಪಡೆಯ ಸಿಬ್ಬಂದಿ ಮುಖ್ಯಸ್ಥ ಜನರಲ್ ಫಿಲಿಪ್ಪೆ ಲವಿಗ್ನೆ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯದವರಿಗೆ ಹೇಳಿಕೆ ನೀಡಿದ ಲವಿಗ್ನೆ, ರಫೇಲ್ ಜೆಟ್ ಚಲಾಯಿಸಿದ ಅನುಭವ ಅದ್ಭುತವಾದುದು ಎಂದು ಭಾರತೀಯ ವಾಯುಪಡೆಯ ಪೈಲಟ್ಗಳು ಹೇಳಿದ್ದಾರೆ. 2-3 ಮೂರು ಜೆಟ್ಗಳನ್ನು ಅವರು ಆರಾಮಾಗಿ ಚಲಾಯಿಸಿದರು. ಅಲ್ಲದೆ ನನ್ನ ಬಳಿ, ವಾಹ್! ಎಂದು ಉದ್ಘರಿಸಿದರು.
ಇಂಡೋ-ಫ್ರೆಂಚ್ ಗರುಡ VI ಅಭ್ಯಾಸದ ವೇಳೆ ಭಾರತೀಯ ಪೈಲಟ್ಗಳು ರಫೇಲ್ ಜೆಟ್ ಚಲಾಯಿಸಿದರು. ನಿನ್ನೆಯಷ್ಟೇ ಮುಕ್ತಾಯವಾದ ಅಭ್ಯಾಸದಲ್ಲಿ ವಾಯು ಮಾರ್ಗದ ರಕ್ಷಣೆ ಕುರಿತಾಗಿ ಫ್ರೆಂಚ್ ಹಾಗೂ ಭಾರತೀಯ ವಾಯುಪಡೆಗೆ ತರಬೇತಿ ನೀಡಲಾಯಿತು. ಈ ಹಿಂದಿನಿಂದಲೂ ಎರಡೂ ರಾಷ್ಟ್ರಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿವೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ ದೃಷ್ಟಿಯಿಂದಲೂ ಇದು ಸಹಕಾರಿಯಾಗಿದೆ ಎಂದಿದ್ದಾರೆ.ಅಭ್ಯಾಸದ ಕುರಿತಾಗಿ ಭಾರತೀಯ ವಾಯುಪಡೆ ಸಹ ಟ್ವೀಟ್ ಮೂಲಕ ತನ್ನ ಅನುಭವವನ್ನು ಬಿಚ್ಚಿಟ್ಟಿದೆ.