ಕರ್ನಾಟಕ

karnataka

ETV Bharat / international

ಲಂಡನ್‌ನಲ್ಲಿ ಭಾರತೀಯ ಮೂಲದ ಯುವತಿ ಬರ್ಬರ ಹತ್ಯೆ.. ಆರೋಪಿ ಹಿಡಿಯಲು ಪೊಲೀಸರ ಹೊಸ ಐಡಿಯಾ!

ವಿದ್ಯಾರ್ಥಿನಿಲಯವೊಂದರಲ್ಲಿ ಭಾರತೀಯ ಮೂಲದ ಬ್ರಿಟನ್ ಯುವತಿಯನ್ನು ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಲಂಡನ್​ನಲ್ಲಿ ನಡೆದಿದೆ.

By

Published : Mar 21, 2022, 2:12 PM IST

Indian origin woman murdered in student flat in London  Indian-Origin Woman Murdered in London  Indian woman murdered in UK  Indian-origin woman killed in student flat in London  ಲಂಡನ್​ನಲ್ಲಿ ಭಾರತೀಯ ಮೂಲಕ ಯುವತಿಯ ಬರ್ಬರ ಕೊಲೆ  ಲಂಡನ್​ನ ವಸತಿನಿಲಯದಲ್ಲಿ ಭಾರತೀಯ ಮೂಲಕ ಮಹಿಳೆ ಕೊಲೆ  ಯುಕೆಯಲ್ಲಿ ಭಾರತೀಯ ಯುವತಿಯ ಕೊಲೆ  ಲಂಡನ್​ ಅಪರಾಧ ಸುದ್ದಿ
ಲಂಡನ್‌ನಲ್ಲಿ ಭಾರತೀಯ ಮೂಲದ ಯುವತಿಯ ಬರ್ಬರ ಹತ್ಯೆ

ಲಂಡನ್( ಇಂಗ್ಲೆಂಡ್​):ಇಲ್ಲಿನ ವಿದ್ಯಾರ್ಥಿನಿಲಯವೊಂದರಲ್ಲಿ ಭಾರತೀಯ ಮೂಲದ ಬ್ರಿಟನ್ ಮಹಿಳೆಯೊಬ್ಬರನ್ನು ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಲಂಡನ್‌ನ ಕ್ಲರ್ಕೆನ್‌ವೆಲ್ ಪ್ರದೇಶದ ಅರ್ಬರ್ ಹೌಸ್ ವಿದ್ಯಾರ್ಥಿ ಫ್ಲಾಟ್‌ನಲ್ಲಿ 19 ವರ್ಷದ ಬ್ರಿಟಿಷ್ ಪ್ರಜೆ ಸಬಿತಾ ಥನ್ವಾನಿ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಸಬಿತಾ ಕತ್ತಿಗೆ ಗಂಭೀರ ಗಾಯಗಳು ಆಗಿರುವುದು ಪತ್ತೆಯಾಗಿದೆ. ಕೊಲೆ ಮಾಡಿದ ಆರೋಪದ ಮೇಲೆ ಸ್ಕಾಟ್ಲೆಂಡ್ ಯಾರ್ಡ್ ಟ್ಯುನಿಷಿಯಾ ಪ್ರಜೆಯನ್ನು ಬಂಧಿಸಿಲಾಗಿದೆ ಎಂದರು. ಸಬಿತಾ ಥನ್ವಾನಿಯೊಂದಿಗೆ 22 ವರ್ಷದ ಮಹರ್ ಮಾರೂಫ್ ಸಂಬಂಧ ಹೊಂದಿದ್ದರು. ಶುಕ್ರವಾರ ಮಾರೂಫ್​ ಜೊತೆನೆ ಥನ್ವಾನಿ ಕಾಲ ಕಳೆದಿದ್ದಾರೆ. ಬಳಿಕ ಬರ್ಬರವಾಗಿ ಹತ್ಯೆಯಾಗಿದ್ದರು. ಕೊಲೆ ಬಳಿಕ ಆರೋಪಿ ನಾಪತ್ತೆಯಾಗಿದ್ದ.

ಓದಿ:ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ; ಕರ್ನಾಟಕ ಹಣ ಮಂಜೂರು ನಿರ್ಧಾರದ ವಿರುದ್ಧ ನಿರ್ಣಯ ಮಂಡನೆಗೆ ಸಿದ್ಧತೆ

ಕೊಲೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡರು. ಪ್ರಾಥಮಿಕ ತನಿಖಾಧಿಕಾರಿ ಮೂಲಕ ಆರೋಪಿ ಮಾರೂಫ್​ ಎಂಬುದು ಪೊಲೀಸರಿಗೆ ತಿಳಿದಿದೆ. ಕೂಡಲೇ ಮೆಟ್ರೋಪಾಲಿಟನ್ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದರು.

ಯಾವುದೇ ಸ್ಥಿರ ವಿಳಾಸ ಹೊಂದಿರದ ಟ್ಯುನೀಷಿಯಾದ ಪ್ರಜೆಯಾಗಿದ್ದ ಆರೋಪಿ ಮಾರೂಫ್​ ವಿದ್ಯಾರ್ಥಿಯಾಗಿರಲಿಲ್ಲ. ಕೊಲೆ ಬಳಿಕ ನಾಪತ್ತೆಯಾಗಿದ್ದ ಮಹರ್ ಮಾರೂಫ್​ಗೆ ‘ನೀವು ಇದನ್ನು ನೋಡಿದ್ರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹಾಜರಾಗಿ, ನಾವು ನಿಮ್ಮೊಂದಿಗೆ ಮಾತನಾಡುವುದು ಮುಖ್ಯ ಎಂದು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ಲಗತ್ತಿಸುವ’ ಮೂಲಕ ಮನವಿ ಮಾಡಿದ್ದರು.

ಭಾನುವಾರದಂದು ಪೊಲೀಸರ ಪ್ರಚಾರದ ಬಳಿಕ ಯುವತಿ ದೇಹ ಕ್ಲರ್ಕೆನ್‌ವೆಲ್‌ನಲ್ಲಿ ಪತ್ತೆ ಆಗಿತ್ತು. ಅದೇ ಪ್ರದೇಶದಲ್ಲಿ ವಾಂಟೆಡ್ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಮೆಟ್ರೋಪಾಲಿಟನ್​ ಪೊಲೀಸರು ತನಿಖೆ ಕೈಗೊಂಡಿದ್ದು, ಶಂಕಿತ ಆರೋಪಿ ಹುಡುಕಲು ಸಹಾಯ ಮಾಡಿದ್ದ ಜನಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

For All Latest Updates

ABOUT THE AUTHOR

...view details