ಲಂಡನ್:ಭಾರತದ ವಿವಿಧ ಬ್ಯಾಂಕ್ಗಳಲ್ಲಿ 9 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದಾರೆ. ಮಧ್ಯದ ದೊರೆಯನ್ನು ಭಾರತಕ್ಕೆ ಕರೆತರಲು ಮುಂದಾಗಿರುವ ಕೇಂದ್ರ ಸರ್ಕಾರ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಲಾಗಿದೆ. ಸದ್ಯ ಮಲ್ಯ ಲಂಡನ್ ರಾಯಲ್ ಕೋರ್ಟ್ ಆಫ್ ಜಸ್ಟೀಸ್ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಮಲ್ಯ ತಪ್ಪಿತಸ್ಥರೆಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ: ಭಾರತ ಸರ್ಕಾರ - ಮಧ್ಯದ ದೊರೆ ವಿಜಯ್ ಮಲ್ಯ
ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಸಾಕ್ಷಿ ಸಾಬೀತಿಗೆ ಎಲ್ಲ ಪುರಾವೆಗಳಿವೆ. ಹಾಗಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಲಂಡನ್ ಕೋರ್ಟ್ನಲ್ಲಿ ಭಾರತ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದಾರೆ.
64 ವರ್ಷದ ಕಿಂಗ್ ಫಿಶರ್ ಏರ್ ಲೈನ್ಸ್ನ ಮಾಜಿ ಮಾಲೀಕ ವಿಜಯ್ ಮಲ್ಯ ವಿರುದ್ಧ 2017ರ ಏಪ್ರಿಲ್ನಲ್ಲಿ ಭಾರತಕ್ಕೆ ಗಡಿಪಾರು ಮಾಡುವ ಕುರಿತು ಬಂಧನ ವಾರೆಂಟ್ ಜಾರಿಯಾಗಿತ್ತು. ಇದೀಗ ಕಿಂಗ್ಫಿಶರ್ ಏರ್ಲೈನ್ಸ್ನ ಆರ್ಥಿಕತೆ ಕುರಿತು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಭಾರತ ಸರ್ಕಾರ ಯುಕೆ ನ್ಯಾಯಾಲಯದಲ್ಲಿ ಪುನರುಚ್ಚರಿಸಿದೆ. ವಿಜಯ್ ಮಲ್ಯ ವಂಚನೆ ಮಾಡಿದ್ದು, ಅವರು ತಪ್ಪಿತಸ್ಥರೆಂದು ಸಾಬೀತುಪಡಿಸಲು ಅನೇಕರ ಪುರಾವೆಗಳಿವೆ ಎಂದು ತಿಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಕೀಲರು ಕೋರ್ಟ್ನಲ್ಲಿ ವಾದ ಮಂಡಿಸಿದ್ದು, ವ್ಯಾಪಾರದಲ್ಲಿ ಕುಸಿಯುತ್ತಿದ್ದ ಕಿಂಗ್ ಫಿಶರ್ ಏರ್ಲೈನ್ಸ್ ಮೇಲೆತ್ತಲು ಮಲ್ಯ ಬ್ಯಾಂಕ್ ಸಾಲ ಪಡೆದಿದ್ದರೇ ಹೊರತು ಬ್ಯಾಂಕ್ ಸಾಲ ತೆಗೆದುಕೊಳ್ಳುವ ಸಮಯದಲ್ಲಿ ಅವರ ಮನಸ್ಸಿನಲ್ಲಿ ಯಾವುದೇ ದುರುದ್ದೇಶವೂ ಇರಲಿಲ್ಲ. ಆ ಸಮಯದಲ್ಲಿ ಅವರು ಶ್ರೀಮಂತ ಉದ್ಯಮಿಯಾಗಿದ್ದರು. ಯಾವುದೇ ವಂಚನೆಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು, ಅವ್ಯವಹಾರ ನಡೆಸುವ ಕೆಲಸವನ್ನು ಅವರು ಮಾಡಲಿಲ್ಲ, ಭಾರತದ ಇತರ ವಿಮಾನಯಾನ ಸಂಸ್ಥೆಗಳಂತೆ ಪ್ರತಿಷ್ಠಿತ ಏರ್ಲೈನ್ ಆಗಿದ್ದ ಕಿಂಗ್ ಫಿಶರ್ ಆರ್ಥಿಕವಾಗಿ ಕುಸಿಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ಮಲ್ಯ ತಪ್ಪಿತಸ್ಥರಲ್ಲ, ವ್ಯವಹಾರದಲ್ಲಿ ದುರುದ್ದೇಶ ಇರಲಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.