ಕರ್ನಾಟಕ

karnataka

ETV Bharat / international

ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್, ಟರ್ಕಿ, ಇಸ್ಲಾಮಿಕ್ ಸ್ಟೇಟ್ಸ್​​ಗೆ ಭಾರತ ತಿರುಗೇಟು - ಪಾಕಿಸ್ತಾನಕ್ಕೆ ಭಾರತ ತಿರುಗೇಟು

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿದ ಪಾಕಿಸ್ತಾನ, ಟರ್ಕಿ ಮತ್ತು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ.

India slams Pakistan, Turkey and OIC
ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ

By

Published : Sep 16, 2020, 7:48 AM IST

ಜಿನೀವಾ:ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 46ನೇ ಅಧಿವೇಶನದಲ್ಲಿ ಪಾಕಿಸ್ತಾನ, ಟರ್ಕಿ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ ಮೇಲೆ ಭಾರತ ಮುಗಿಬಿದ್ದಿದೆ.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಟರ್ಕಿ ಮಾಡಿದ ಉಲ್ಲೇಖಕ್ಕೆ ಪ್ರತಿಕ್ರಿಯಿಸಿದ ಭಾರತ, ಟರ್ಕಿಗೆ ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸುವುದರಿಂದ ದೂರವಿರಲು ಮತ್ತು ಪ್ರಜಾಪ್ರಭುತ್ವ ಆಚರಣೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದೆ.

ಅಧಿವೇಶನದಲ್ಲಿ ಮಾತನಾಡಿದ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾದ ಮೊದಲ ಕಾರ್ಯದರ್ಶಿ ಪವನ್ ಬಾಧೆ, ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಒಐಸಿ(ಇಸ್ಲಾಮಿಕ್ ಸಹಕಾರದ ಸಂಘಟನೆ) ನೀಡಿದ ಉಲ್ಲೇಖವನ್ನು ನಾವು ತಿರಸ್ಕರಿಸುತ್ತೇವೆ. ಒಐಸಿಗೆ ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸಲು ಯಾವುದೆ ಹಕ್ಕಿಲ್ಲ. ಒಐಸಿ ತನ್ನದೇ ಆದ ಕಾರ್ಯಸೂಚಿಯನ್ನು ಹಾಳು ಮಾಡಲು ಪಾಕಿಸ್ತಾನಕ್ಕೆ ದುರುಪಯೋಗಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಪಾಕಿಸ್ತಾನಕ್ಕೆ ಹಾಗೆ ಮಾಡಲು ಅವಕಾಶ ನೀಡುವುದು ತಮ್ಮ ಹಿತಾಸಕ್ತಿಗಳೇ ಎಂದು ಒಐಸಿ ಸದಸ್ಯರೇ ನಿರ್ಧರಿಸಬೇಕು ಎಂದಿದ್ದಾರೆ.

ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಬಾಧೆ, "ಪಾಕಿಸ್ತಾನವು ನನ್ನ ದೇಶವನ್ನು ತನ್ನ ಸ್ವ-ಸೇವೆಯ ದುರುದ್ದೇಶಪೂರಿತ ಉದ್ದೇಶಗಳಿಗಾಗಿ ಸುಳ್ಳು ಮತ್ತು ಕಟ್ಟುಕಥೆ ನಿರೂಪಣೆಗಳಿಂದ ನಿಂದಿಸುವುದು ಅಭ್ಯಾಸವಾಗಿದೆ" ಎಂದು ಹೇಳಿದರು.

ತನ್ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರಂತರವಾಗಿ ಕಿರುಕುಳ ನೀಡಿದ, ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ, ವಿಶ್ವಸಂಸ್ಥೆ ನಿರ್ಬಂಧಗಳ ಪಟ್ಟಿಯಲ್ಲಿರು ವ್ಯಕ್ತಿಗಳಿಗೆ ಪಿಂಚಣಿ ನೀಡುವ ಹೆಗ್ಗಳಿಕೆ ಹೊಂದಿರುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡಲು ಹತ್ತಾರು ಭಯೋತ್ಪಾದಕರಿಗೆ ತರಬೇತಿ ನೀಡುವುದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುವ ಪ್ರಧಾನ ಮಂತ್ರಿಯನ್ನು ಹೊಂದಿರುವ ದೇಶದಿಂದ ಮಾನವ ಹಕ್ಕುಗಳ ಕುರಿತು ಈ ಅಪೇಕ್ಷಿಸದ ಉಪನ್ಯಾಸಕ್ಕೆ ಭಾರತ ಅಥವಾ ಇತರರು ಅರ್ಹರಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details