ವಾಷಿಂಗ್ಟನ್/ದೆಹಲಿ :ವಿವಾದಿತ ಲಡಾಖ್ ಪ್ರದೇಶದಲ್ಲಿ ನಡೆದ ಗಡಿ ಘರ್ಷಣೆಯಲ್ಲಿ ಭಾರತೀಯ ಪಡೆಗಳನ್ನು ಸೋಲಿಸಲು ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಚೀನಾ ಪ್ರಾಧ್ಯಾಪಕರೊಬ್ಬರು ನೀಡಿದ ಹೇಳಿಕೆಯನ್ನು ಭಾರತ ಮಂಗಳವಾರ ತಳ್ಳಿಹಾಕಿದೆ.
ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಇದು ಚೀನಾದ ಕುತಂತ್ರ ಕೆಲಸ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಡಾಖ್ ಪ್ರಾಂತ್ಯದಲ್ಲಿ ತಮ್ಮ ಸೇನೆ ಸದ್ಯ ಹಿಡಿತ ಹೊಂದಿದ್ದು, ಚೀನಾದ ಮಾಧ್ಯಮಗಳು ಮಾಡುತ್ತಿರುವ ಸುದ್ದಿಯು ನಕಲಿಯಾಗಿದೆ. ಲಡಾಖ್ನಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಚೀನಾದ ಬೀಜಿಂಗ್ ಮೂಲದ ಪ್ರಾಧ್ಯಾಪಕರೊಬ್ಬರು, ಚೀನಾದ ಸೇನಾಪಡೆಗಳು ಪರ್ವತದ ಅತಿ ಎತ್ತರ ಪ್ರದೇಶವನ್ನು ಮೈಕ್ರೊವೇವ್ ಒವನ್ ಆಗಿ ಬಳಸಿ ವಿವಾದಿತ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಭಾರತದೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಎರಡು ಪ್ರಮುಖ ಪರ್ವತಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಎಕ್ಸಾಮಿನರ್ ವರದಿ ಮಾಡಿತ್ತು.
ಇದು ಚೀನಾದಿಂದ ಬಂದ ಶುದ್ಧ ಸುಳ್ಳು ವರದಿ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ಮಿಲಿಟರಿ ಪಡೆಯ ಅಧಿಕಾರಿಗಳು ಮಂಗಳವಾರ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಈ ಮಾಧ್ಯಮದಲ್ಲಿ ಉಲ್ಲೇಖಿಸಿರುವ ವರದಿ ನಕಲಿ ಎಂದು ಸೇನೆ ಟ್ವೀಟ್ ಮಾಡಿದೆ. ಅಲ್ಲದೇ ಲಡಾಖ್ನಲ್ಲಿ ಅಂತಹ ಯಾವುದೇ ಸಂಘರ್ಷನಾತ್ಮಕ ಘಟನೆಗಳು ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆ. 29ರಂದು ಈ ದಾಳಿ ಕಳೆದ ನಡೆದಿತ್ತು ಎಂದು ಪ್ರಾಧ್ಯಾಪಕರೊಬ್ಬರು ಹೇಳಿರುವ ಹೇಳಿಕೆಯ ಬಗ್ಗೆ ವರದಿ ಬಿತ್ತರಗೊಂಡಿದ್ದು, ಭಾರತೀಯ ಅಧಿಕಾರಿಗಳು ಮಾತ್ರ ಅದನ್ನು ಅಲ್ಲಗಳೆದಿದ್ದಾರೆ.