ಕರ್ನಾಟಕ

karnataka

By

Published : Nov 28, 2020, 4:37 PM IST

ETV Bharat / international

ಕಡಲ ತೀರದ ಭದ್ರತೆ ಸಂಬಂಧ ತ್ರಿಪಕ್ಷೀಯ ಸಭೆ; ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿ

ಕಡಲ ತೀರದ ಭದ್ರತೆ, ಸಹಕಾರ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಇಂದು ತ್ರಿಪಕ್ಷೀಯ ಸಭೆ ನಡೆಸಲಾಯಿತು. ಚರ್ಚೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು.

India, Maldives, Sri Lanka trilateral meet on maritime security begins
ತ್ರಿಪಕ್ಷೀಯ ಸಭೆ

ಕೊಲಂಬೊ: ಕಡಲ ತೀರದ ಭದ್ರತೆ, ಸಹಕಾರ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವಿನ ತ್ರಿಪಕ್ಷೀಯ ಸಭೆಯು ಶನಿವಾರ ಆರಂಭವಾಗಿದ್ದು ಹಲವು ಮಹತ್ವದ ಸಂಗತಿಗಳನ್ನು ಚರ್ಚಿಸಲಾಗಿದೆ ಎಂದು ಭಾರತೀಯ ರಾಜಭಾರಿ ಕಚೇರಿ ತಿಳಿಸಿದೆ.

ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ್​ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಹತ್ವದ ಮಾತುಕತೆ ಸಂಬಂಧ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿನ್ನೆಯೇ ಇಲ್ಲಿಗೆ ಆಗಮಿಸಿದ್ದಾರೆ. ಅದರಂತೆ ಇಂದು ಕಡಲ ತೀರದ ಸುರಕ್ಷೆ ಮತ್ತು ಭದ್ರತಾ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಅಜಿತ್ ದೋವಲ್ ಜೊತೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಮರಿಯಾ ದೀದಿ ಮತ್ತು ಶ್ರೀಲಂಕಾದ ರಕ್ಷಣಾ ಪ್ರಧಾನ ಕಾರ್ಯದರ್ಶಿ ಮೇಜರ್ ಜನರಲ್ (ನಿವೃತ್ತ) ಕಮಲ್ ಗುಣರತ್ನ ಚರ್ಚೆಯಲ್ಲಿದ್ದರು.

ಕಡಲದ ತೀರದ ಸುರಕ್ಷೆ ಮತ್ತು ಭದ್ರತಾ ಸಹಕಾರ ಕುರಿತು ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವೆ ತ್ರಿಪಕ್ಷೀಯ ಸಭೆ ನಡೆಯುತ್ತಿದೆ. ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ್​​ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು ಎಂದು ಭಾರತೀಯ ರಾಜಭಾರಿ ಟ್ವೀಟ್ ಮಾಡಿದೆ. ಎನ್‌ಎಸ್‌ಎ ಮಟ್ಟದಲ್ಲಿ ಇದು ಮೊದಲ ಸಭೆಯಾಗಿದೆ.

ಇದನ್ನೂ ಓದಿ: ತ್ರಿಪಕ್ಷೀಯ ಕಡಲ ಭದ್ರತಾ ಸಹಕಾರ: ಕೊಲಂಬೊ ತಲುಪಿದ ಅಜಿತ್ ದೋವಲ್

ಉಭಯ ರಾಷ್ಟ್ರಗಳ ಮಧ್ಯ ಇಂದು ನಡೆದ ಮಹತ್ವದ ಚರ್ಚೆಯು ಕಡಲದ ತೀರದ ಸುರಕ್ಷೆ ಹಾಗೂ ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯ ಹೊಂದಲು ಇದು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ. ಕಡಲದ ತೀರದ ಸುರಕ್ಷೆ ಮತ್ತು ಭದ್ರತಾ ಸಹಕಾರ ಕುರಿತು ಆರು ವರ್ಷಗಳ ನಂತರ ತ್ರಿಪಕ್ಷೀಯ ಸಭೆ ನಡೆದಿದೆ. 2011ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆದಿದ್ದರೆ, 2013 ರಲ್ಲಿ ಶ್ರೀಲಂಕಾದಲ್ಲಿ ಮತ್ತು 2014 ರಲ್ಲಿ ಭಾರತದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿತ್ತು.

ABOUT THE AUTHOR

...view details