ಐರ್ಲೆಂಡ್: ಮಂಗಳವಾರದಿಂದ ಐರ್ಲೆಂಡ್‌ನ ಕಡ್ಡಾಯ ಹೋಟೆಲ್ ಕ್ವಾರಂಟೈನ್ ಪಟ್ಟಿಗೆ ಸೇರ್ಪಡೆಗೊಳ್ಳುವ ಐದು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಐರಿಶ್ ಸರ್ಕಾರ ಪ್ರಕಟಿಸಿದೆ.
"ನಿರ್ದಿಷ್ಟವಾಗಿ ಗೊತ್ತುಪಡಿಸಿದ ದೇಶಗಳಿಂದ ಐರ್ಲೆಂಡ್‌ಗೆ ಪ್ರಯಾಣ ಬೆಳೆಸುವವರು ಕಡ್ಡಾಯವಾಗಿ ಹೋಟೆಲ್ ಕ್ಯಾರೆಂಟೈನ್‌ಗೆ ಒಳಪಡಬೇಕಾಗುತ್ತದೆ. ಪ್ರಯಾಣದ ಮುಂಚಿತವಾಗಿ ಇದನ್ನು ಮೊದಲೇ ಕಾಯ್ದಿರಿಸಬೇಕು" ಎಂದು ಶುಕ್ರವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.