ವಿಶ್ವಸಂಸ್ಥೆ(ನ್ಯೂಯಾರ್ಕ್):ಉಕ್ರೇನ್ ಮೇಲೆ ರಷ್ಯಾದ ದಾಳಿಯ ವಿರುದ್ಧ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನ ಕರೆಯಲು ನಡೆದ ಮತದಾನದಿಂದ ಭಾರತ ದೂರ ಉಳಿದಿದೆ. ಇದೇ ವೇಳೆ, ಬೆಲಾರಸ್ನಲ್ಲಿ ಉಕ್ರೇನ್ ಮತ್ತು ರಷ್ಯಾ ಮಾತುಕತೆಗೆ ಒಪ್ಪಿಕೊಂಡಿದ್ದನ್ನು ಸ್ವಾಗತಿಸಿತು.
ಸಾಮಾನ್ಯ ಸಭೆ ಕರೆಯುವ ಪರವಾಗಿ 15 ಮತಗಳಲ್ಲಿ 11 ಮತಗಳು ಬಂದಿದ್ದು, ಸೋಮವಾರ ಬಿಕ್ಕಟ್ಟಿನ ಕುರಿತು ಸಾಮಾನ್ಯ ಸಭೆ ನಡೆಯಲಿದೆ. ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದವು. ರಷ್ಯಾ, ಈ ಸಭೆ ನಡೆಸುವ ನಿರ್ಣಯದ ವಿರುದ್ಧ ಮತ ಚಲಾಯಿಸಿತು. 1950ರ ಬಳಿಕ ವಿಶ್ವಸಂಸ್ಥೆಯಲ್ಲಿ ಕರೆದ ಸಾಮಾನ್ಯ ಸಭೆಯ 11ನೇ ತುರ್ತು ಅಧಿವೇಶನ ಇದಾಗಿದೆ.