ಕರ್ನಾಟಕ

karnataka

ETV Bharat / international

ಲಾಕ್‌ಡೌನ್‌ ವೇಳೆ ಪೋರ್ನ್‌ಸೈಟ್‌ಗಳತ್ತ ಮುಗಿಬಿದ್ದ ಜನ; ದೇಶದಲ್ಲಿ 'ಸೆಕ್ಸ್​​' ವೀಕ್ಷಣೆ ಶೇ 95ರಷ್ಟು ಹೆಚ್ಚಳ! - ಅಶ್ಲೀಲ ಚಿತ್ರ ವೀಕ್ಷಣೆಯಲ್ಲಿ ಹೆಚ್ಚಳ

ಮನೆಯಲ್ಲೇ ಕುಳಿತು ಬೋರ್​ ಅನಿಸಿದ್ದವರು ಲಾಕ್‌ ಡೌನ್​ ವೇಳೆ ಪೋರ್ನ್​ ಸೈಟ್​ಗಳತ್ತ ಮುಖ ಮಾಡಿದ್ದಾರೆ. ಜನರು ಟೈಂ ಪಾಸ್​ಗಾಗಿ ಅಶ್ಲೀಲ ಚಿತ್ರಗಳ ವೀಕ್ಷಣೆಯನ್ನು ನೆಚ್ಚಿಕೊಂಡಿರುವುದು ವಿಶ್ವದ ಅತಿ ದೊಡ್ಡ ಪೋರ್ನ್​ ಸೈಟ್,​ ಪೋರ್ನ್​ ಹಬ್ ನೀಡಿರುವ ಅಂಕಿ-ಅಂಶಗಳಿಂದ ಸಾಬೀತಾಗಿದೆ.

sex
ಸೆಕ್ಸ್​

By

Published : Apr 12, 2020, 12:17 PM IST

ಸಿಂಗಾಪುರ: ಕೊರೊನಾ ಸೋಂಕು ಜಗತ್ತನ್ನು ಮನೆಯಲ್ಲೇ ಕೂಡಿ ಹಾಕಿದ್ದು, ಟೈಂ ಪಾಸ್​ ಮಾಡೋಕೆ ಜನ ಪೋರ್ನ್​ ಸೈಟ್​ಗಳ ಮೊರೆ ಹೋಗಿದ್ದಾರೆ. ಎಲ್ಲಿಯವರೆಗೆ ಅಂದ್ರೆ ಲಾಕ್​ಡೌನ್​ ಮುಂಚೆ ಶೇ. 20ರೊಳಗಿದ್ದ ಅಶ್ಲೀಲ ಚಿತ್ರಗಳ ವೀಕ್ಷಣೆ ಇದೀಗ ಶೇ. 95ಕ್ಕೇರಿದೆ.

ಲಾಕ್​ಡೌನ್​ ಆರಂಭವಾಗುತ್ತಿದ್ದಂತೆ, ದೇಶದಲ್ಲಿ ಕಾಂಡೋಮ್​ ಖರೀದಿ ಹೆಚ್ಚಳವಾಗಿತ್ತು. ಆ ಬಳಿಕ ಮನೆಯಲ್ಲೇ ಕುಳಿತು ಸಮಯ ಹರಣ ಮಾಡಲು ಹೆಣಗಾಡುತ್ತಿರುವ ಜನ ಸೆಕ್ಸ್​ ವಿಡಿಯೋಗಳ ಮೊರೆ ಹೋಗಿದ್ದಾರೆ. ಇದರ ಪರಿಣಾಮವೇ ಶೇ. 20ರಷ್ಟಿದ್ದ ಪೋರ್ನ್​ ವೀಕ್ಷಣೆ, ಇದೀಗ ಶೇ. 95ಕ್ಕೇರಿದೆ.

ವಿಶೇಷವೆಂದರೆ ಲಾಕ್​ಡೌನ್​ನ ಅಧಿಕೃತ ಆದೇಶದ ಮೊದಲೇ ಭಾರತದಲ್ಲಿ ಈ ಅಶ್ಲೀಲ ಚಿತ್ರಗಳ ವೀಕ್ಷಣೆ 20% ದಷ್ಟು ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿದೆ. ಅಂದರೆ ಜನರು ಆ ಮುಂಚಿತವಾಗಿಯೇ ಲಾಕ್​ಡೌನ್​ಗೆ ತಯಾರಾಗಿದ್ದು, ಮನೆಯಲ್ಲೇ ಮನರಂಜನೆಗೆ ಸಿದ್ಧರಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ವಿಶ್ವದ ಅತಿ ದೊಡ್ಡ ಪೋರ್ನ್​ ಸೈಟ್,​ ಪೋರ್ನ್​ ಹಬ್​ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಲಾಕ್​ಡೌನ್​ ಸಮಯದಲ್ಲಿ ಭಾರತ, ಫ್ರಾನ್ಸ್​, ಜರ್ಮನಿ, ಇಟಲಿ, ರಷ್ಯಾ, ದಕ್ಷಿಣ ಕೊರಿಯಾ, ಸ್ಪೇನ್​, ಅಮೆರಿಕಾ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಬ್ಲ್ಯೂ ಫಿಲ್ಮ್​ ವೀಕ್ಷಣೆ ಹೆಚ್ಚಿದೆ.

ಮಾರ್ಚ್​ 17ಕ್ಕೆ ಅಧಿಕೃತ ಲಾಕ್​ಡೌನ್​ ಆದೇಶ ಹೊರಬಿದ್ದ ಬಳಿಕ ಫ್ರಾನ್ಸ್​ನಲ್ಲಿ ಶೇ, 40ರಷ್ಟು ನೀಲಿಚಿತ್ರ ವೀಕ್ಷಣೆ ಹೆಚ್ಚಿದೆ. ಜರ್ಮನಿಯಲ್ಲಿ ಲಾಕ್​ಡೌನ್​ ವೇಳೆ ಶೇ. 25, ಇಟಲಿಯಲ್ಲಿ 55ಶೇ. ರಷ್ಯಾದಲ್ಲಿ ಶೇ. 56, ಸ್ಪೇನ್​ನಲ್ಲಿ ಶೇ. 60ರಷ್ಟು ಅಶ್ಲೀಲ ಚಿತ್ರ ವೀಕ್ಷಣೆ ಹೆಚ್ಚಿದೆ ಎಂದು ಪೋರ್ನ್​ ಹಬ್ ಅಂಕಿ-ಅಂಶಗಳು ಹೇಳಿದೆ.

ABOUT THE AUTHOR

...view details