ಹೈದರಾಬಾದ್: ಕೊರೊನಾ ವೈರಸ್ನಿಂದ ಜಗತ್ತಿನಲ್ಲಿ ಉಂಟಾಗಿರುವ ಈ ಸಂಕಷ್ಟ 'ಮಾನವ ಕುಲದ ಕರಾಳ ಅಧ್ಯಾಯ'ವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯೆವಾ ಹೇಳಿದ್ದಾರೆ.
ಕಳೆದ 75 ವರ್ಷಗಳಲ್ಲಿ ಇಂಥದೊಂದು ಬಿಕ್ಕಟ್ಟು ಯಾವತ್ತೂ ಉದ್ಭವಿಸಿರಲಿಲ್ಲ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಐಎಂಎಫ್ ತನ್ನ ತುರ್ತು ನಿಧಿಯ ಲಭ್ಯತೆಯನ್ನು ದ್ವಿಗುಣಗೊಳಿಸಿದೆ. ತುರ್ತು ನಿಧಿ ಅಗತ್ಯವಿರುವ ದೇಶಗಳಿಗೆ ಈ ಮುನ್ನ ನೀಡಲಾಗುತ್ತಿದ್ದ 50 ಬಿಲಿಯನ್ ಡಾಲರ್ ಬದಲು 100 ಬಿಲಿಯನ್ಗೆ ಹೆಚ್ಚಿಸಲಾಗಿದೆ ಎಂದು ವಿಶ್ವಸಂಸ್ಥೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.