ನವದೆಹಲಿ: ವಿಶ್ವದ ಬೆಸ್ಟ್ ಟಾಯ್ಲೆಟ್ ಪೇಪರ್ ಯಾವುದು ಗೊತ್ತಾ... ಪಾಕಿಸ್ತಾನದ ಧ್ವಜವಂತೆ. ಇದು ನಿಜ. ಅಪ್ಪಿತಪ್ಪಿ ಗೂಗಲ್‌ನಲ್ಲಿ ನೀವು 'World Best Toilet Paper' ಸರ್ಚ್ ಕೊಟ್ರೇ ಪಾಕ್‌ನ ಧ್ವಜವೇ ಕಾಣಿಸುತ್ತೆ.
ಪುಲ್ವಾಮಾ ದಾಳಿಯ ಬಳಿಕ ಬರೀ ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವದೆಲ್ಲೆಡೆ ಜನ ಗೋಸುಂಬೆ ಮುಖದ ಪಾಕಿಸ್ತಾನವನ್ನ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಮಾನವೀಯತೆ ಇರುವ ಯಾವೊಬ್ಬರೂ ಮಗ್ಗಲು ಮುಳ್ಳಾಗಿರುವ ನೆರೆ ರಾಷ್ಟ್ರದ ಕೃತ್ಯ ಖಂಡಿಸದೇ ಇರಲ್ಲ. ಜೈಷ್-ಏ ಮೊಹ್ಮದ್‌ನ ಮೌಲಾನಾ ಮಸೂದ್ ಅಜರ್‌ನ ತೆರೆಮರೆಯಲ್ಲಿಟ್ಕೊಂಡು ಪಾಕ್ ಉಗ್ರರ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದೆ ಅಂತ ವಿಶ್ವದ ಗಣ್ಯ ನಾಯಕರು ಕಿಡಿಕಾರಿದ್ದರು.
ಫೆಬ್ರವರಿ 14ರ ಪುಲ್ವಾಮಾ ದಾಳಿಯ ಹೊಣೆಯನ್ನ ಜೆಇಎಂ ತಾನೇ ಹೊತ್ತುಕೊಂಡಿತ್ತು. ಈಗ ಸೋಷಿಯಲ್ ಮೀಡಿಯಾದಲ್ಲಂತೂ ಪಾಕ್ ವಿಕೃತಿಯನ್ನ ಯದ್ವಾತದ್ವಾ ಹೀಗಳೆಯಲಾಗುತ್ತಿದೆ. ಈಗ ಗೋಗಲ್‌ನಲ್ಲಿ ಕೂಡ ಪಾಕ್ ವಿರುದ್ಧ ವಿರುದ್ಧ ವ್ಯಂಗ್ಯ ಭರಿತ ಆಕ್ರೋಶ ಕಾಣಸಿಗುತ್ತಿವೆ. 'Best Toilet Paper In The World' ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ರೇ ಆಗ ಪಾಕಿಸ್ತಾನದ ಧ್ವಜ ಕಾಣುತ್ತೆ. ಈ ಫೋಟೋಗಳೇ ಈಗ ಟ್ವಿಟರ್, ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲ, ಪಾಕ್ ವಿರುದ್ಧ ನೆಟ್ಟಿಗರು ಭಿನ್ನ-ಭಿನ್ನವಾಗಿ ಕಿಡಿಕಾರುತ್ತಿದ್ದಾರೆ. ಅಸಂವಿಧಾನಿಕ ಭಾಷೆಯಲ್ಲಿ ಪಾಪಿಸ್ತಾನದ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ.
ಗೂಗಲ್ ಕೂಡ ಪಾಕ್ ಧ್ವಜವನ್ನ ಟಾಯ್ಲೆಟ್‌ಗೆ ಬಳಸುವ ಒಳ್ಳೇ ಪೇಪರ್ ಎಂದು ತಿಳಿದಿದೆ ಅಂತ ಕಿಡಿಕಾರಿದ್ದಾರೆ ಟ್ವಿಟಿಗರು. ಇನ್ನು ಕೆಲವರು ಗೂಗಲ್ ಒಳ್ಳೇ ಉತ್ತರವನ್ನೇ ಕೊಟ್ಟಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಪುಲ್ವಾಮಾ ದಾಳಿಯಾಗಿ 2 ದಿನ ಕಳೆದ ಬಳಿಕ ಪಾಕ್ ಧ್ವಜ ಶೌಚಾಲಯಕ್ಕೆ ಬಳಸುವ ಒಳ್ಳೇ ಪೇಪರ್ ಅನ್ನೋ ಚಿತ್ರಗಳು ಹೆಚ್ಚೆಚ್ಚು ಶೇರ್ ಆಗಿವೆ. ಅಲ್ಲದೇ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡಾಗಿದೆ. ಇದಷ್ಟೇ ಅಲ್ಲ, ಮತ್ತೆ ಕೆಲವರು ಪಾಕ್ ಧ್ವಜ ತುಳಿದು ಆ ಚಿತ್ರಗಳನ್ನ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.