ಆಸ್ಟ್ರೇಲಿಯಾ :ಇವರುವಿಶ್ವದಲ್ಲೇ ಒಂದೇ ರೀತಿ ಕಾಣುವ ಆಸ್ಟ್ರೇಲಿಯಾ ಮೂಲದಅವಳಿ ಸಹೋದರಿಯರು. ಆಹಾರದಿಂದ ಹಾಸಿಗೆಯವರೆಗೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಹಂಚಿಕೊಳ್ಳುತ್ತಾರೆ. ಒಟ್ಟಿಗೆ ಊಟ ಮಾಡುತ್ತಾರೆ, ಒಟ್ಟಿಗೆ ಮಲಗುತ್ತಾರೆ. ಅನುಭವಗಳನ್ನು ಒಟ್ಟಿಗೆ ವ್ಯಕ್ತಪಡಿಸುತ್ತಾರೆ. ಪ್ರತಿಯೊಂದನ್ನೂ ಜೊತೆಯಲ್ಲೇ ಮಾಡುವ ಈ ಅವಳಿ ಸಹೋದರಿಯರು ವಿಚಿತ್ರ ಆಸೆಯೊಂದನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಒಂದೇ ರೀತಿಯ ಬಟ್ಟೆಗಳನ್ನು ಹಾಕುತ್ತಾರೆ. ಸ್ನಾನ ಗೃಹಕ್ಕೆ ಮತ್ತು ಶೌಚಾಲಯಕ್ಕೂ ಒಟ್ಟಿಗೆಯೇ ಹೋಗುತ್ತಾರೆ. ಮತ್ತೊಂದು ಅಚ್ಚರಿ ಅಂದರೆ ಇಬ್ಬರೂ ಗೆಳೆಯನೊಬ್ಬನನ್ನೇ ಹೊಂದಿದ್ದಾರೆ. ಈಗ ಒಮ್ಮೆಗೇ ಗರ್ಭಧರಿಸಬೇಕು. ಆ ಅನುಭವ ಒಂದೇ ಬಾರಿಗೆ ಪಡೆಯುವ ಬಯಕೆಯನ್ನು ಹೊಂದಿದ್ದೇವೆ ಎಂದು ಗೆಳೆಯನನ್ನು ಪ್ರಸ್ತಾಪಿಸಿ ಈ ಕೋರಿಕೆಯನ್ನು ಆತನ ಮುಂದಿಟ್ಟಿದ್ದಾರೆ! ಇದು ಹೇಗೆ ಸಾಧ್ಯ?
ಪರ್ತ್ನಲ್ಲಿ ನೆಲೆಸಿರುವ 34 ವರ್ಷದ ಅವಳಿ ಸಹೋದರಿಯರ ಹೆಸರು ಆನ್ನಾ ಮತ್ತು ಲೂಸಿ ಡೆಸಿಂಕ್. 39 ವರ್ಷದ ಗೆಳೆಯ ಬೆನ್ ಬೈರ್ನ್ಅವರನ್ನು ವರಿಸಿದ್ದಾರೆ. ಈ ಮೊದಲು ಹಲವು ಹುಡುಗರೊಂದಿಗೆ ಡೇಟಿಂಗ್ ಮಾಡಿದ್ದೇವೆ. ಎಲ್ಲರೂ ನಮ್ಮಿಬ್ಬರನ್ನೂ ಪ್ರತ್ಯೇಕಿಸಲು ಮುಂದಾಗುತ್ತಿದ್ದರು ಎಂದ ಸಹೋದರಿಯರು, ಬೆನ್ ಎಲ್ಲರಿಗಿಂತ ಭಿನ್ನ. ಅದಕ್ಕಾಗಿಯೇ ಆತನೊಂದಿಗೆ ಒಂದೇ ಹಾಸಿಗೆ ಹಂಚಿಕೊಳ್ಳುವುದನ್ನು ಪ್ರಸ್ತಾಪಿಸಿದ್ದೇವೆ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ವಿಚಿತ್ರ ಆಸೆ ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಹುಟ್ಟಿದಾಗಿನಿಂದ ಈವರೆಗೂ ಎಲ್ಲವನ್ನೂ ಒಟ್ಟಿಗೆ ಮಾಡಿದ ನಾವು ಗರ್ಭಧರಿಸಬೇಕೆಂಬ ಆಸೆ ಹೊಂದಿದ್ದೇವೆ. ಆದರೆ, ಪ್ರನಾಳ ಶಿಶು ಸೃಷ್ಟಿ (ಐವಿಎಫ್) ಪ್ರಕಾರ ಇದು ಅಸಾಧ್ಯವಾಗಿದೆ. ನಾವು ಒಟ್ಟಿಗೆ ಬದುಕುತ್ತೇವೆ ಮತ್ತು ಸಾಯುತ್ತೇವೆ. ಅದೇ ರೀತಿ ಗರ್ಭವನ್ನೂ ಏಕಕಾಲದಲ್ಲೇ ಧರಿಸುವಂತಾಗಬೇಕು. ಹೀಗಾಗಿ, ಅದು ಸಾಧ್ಯವಾಗುತ್ತದೆಯೇ, ಇಲ್ಲವೇ ಎಂಬುದನ್ನು ನಾವು ಐವಿಎಫ್ ವಿಧಾನವನ್ನು ನೋಡುತ್ತಿದ್ದೇವೆ. ಭವಿಷ್ಯವು ಏನು ಎಂದು ನನಗೆ ತಿಳಿದಿಲ್ಲ. ಆದರೆ, ಅದು ಏನೇ ಇರಲಿ. ಒಟ್ಟಿಗೆ ಗರ್ಭ ಧರಿಸಬೇಕೆಂಬ ಬಯಕೆ ಹೊಂದಿದ್ದೇವೆ ಎಂದರು.
ಇತರರಿಗೆ ವಿಚಿತ್ರವೆನಿಸಿದರೂ ಇಷ್ಟಪಟ್ಟಂತೆ ಬದುಕಲು ದೃಢ ನಿಶ್ಚಯ ಹೊಂದಿದ್ದೇವೆ ಎನ್ನುತ್ತಾರೆ ಲೂಸಿ. ಒಬ್ಬರು ಗಂಡು ಮತ್ತು ಇನ್ನೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಎಂದು ಟಿವಿ ಕಾರ್ಯಕ್ರಮದ ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸ ಅವರು, ನಮಗೆ ತೊಂದರೆ ಇಲ್ಲ. ಮಕ್ಕಳು ಆರೋಗ್ಯವಾಗಿದ್ದರೆ ಸಾಕು ಎಂದರು.