ಮ್ಯಾಂಚೆಸ್ಟರ್/ ಇಸ್ಲಮಾಬಾದ್:ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ರನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಾಸಿಂ ಅಕ್ರಮ್ ಕೈಯಲ್ಲಿದ್ದ ಇನ್ಸುಲಿನ್ ನನ್ನು ಬ್ಯಾಗ್ ನಿಂದ ತೆಗೆದಿರುವ ವಿಮಾನ ನಿಲ್ಧಾಣ ಅಧಿಕಾರಿಗಳು ಪ್ಲಾಸ್ಟಿಕ್ ಚೀಲಕ್ಕೆ ಸುರಿಯುವಂತೆ ತಿಳಿಸಿದ್ದರು. ಈ ಬಗ್ಗೆ ವಾಸಿಂ ಅಕ್ರಮ್ ಟ್ವಿಟ್ಟರ್‌ನಲ್ಲಿ ಅಸಮಧಾನ ವ್ಯಕ್ತಪಡಿಸಿದ್ದು,"ತನ್ನ ಪ್ರಯಾಣದ ಕೋಲ್ಡ್ ಕೇಸ್ನಿಂದ ಇನ್ಸುಲಿನ್ ಅನ್ನು ಹೊರತೆಗೆಯಲು ಮತ್ತು ಅದನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಲು ತಿಳಿಸಿದರು. ಇದರಿಂದಾಗಿ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ನಾನು ತುಂಬಾ ನಿರಾಶೆಗೊಳ್ಳುವಂತಾಯಿತು. ನನ್ನ ಇನ್ಸುಲಿನ್‌ನೊಂದಿಗೆ ನಾನು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದೇನೆ. ಆದರೆ ನಾನು ಎಂದಿಗೂ ಮುಜುಗರಕ್ಕೊಳಗಾಗಿದ್ದಿಲ್ಲ. ನನ್ನನ್ನು ಅಸಭ್ಯವಾಗಿ ಪ್ರಶ್ನಿಸಿದ್ದರಿಂದ ಮತ್ತು ನನ್ನ ಇನ್ಸುಲಿನ್ ಪ್ರಯಾಣದ ಕೋಲ್ಡ್ ಕೇಸ್‌ನಿಂದ ಹೊರತೆಗೆಯಲು ಸಾರ್ವಜನಿಕವಾಗಿ ಆದೇಶಿಸಿದ್ದರಿಂದ ನನಗೆ ತುಂಬಾ ಅವಮಾನವಾಯಿತು ಎಂದು ಬರೆದುಕೊಂಡಿದ್ದಾರೆ.