ಲಂಡನ್:ರಾಜಮನೆತನದ ಯುವರಾಜ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದು, ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದಾರೆ. ರಾಜಾಧಿಕಾರ ತೊರೆದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಆ ಜೋಡಿ ಕಾಣಿಸಿಕೊಂಡಿದೆ.
ಅರಮನೆ ವೈಭೋಗದ ಜೀವನ ತೊರದ ಬಳಿಕ ಮೊದಲ ಸಲ ಕಾಣಿಸಿಕೊಂಡ ಹ್ಯಾರಿ, ಪತ್ನಿ ಮೇಘನ್! - ಹ್ಯಾರಿ, ಪತ್ನಿ ಮೇಘನ್
ಅರಮನೆಯ ವೈಭೋಗದ ಜೀವನಕ್ಕೆ ವಿದಾಯ ಹೇಳಿ, ಸಾಮಾನ್ಯ ಜೀವನ ಸಾಗಿಸುತ್ತಿರುವ ಲಂಡನ್ ಯುವರಾಜ್ ಹಾಗೂ ಆತನ ಪತ್ನಿ ಇದೇ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
![ಅರಮನೆ ವೈಭೋಗದ ಜೀವನ ತೊರದ ಬಳಿಕ ಮೊದಲ ಸಲ ಕಾಣಿಸಿಕೊಂಡ ಹ್ಯಾರಿ, ಪತ್ನಿ ಮೇಘನ್! Harry, Meghan](https://etvbharatimages.akamaized.net/etvbharat/prod-images/768-512-5998265-thumbnail-3x2-wdfdfdf.jpg)
ಜೆಪಿ ಮಾರ್ಗನ್ ಆಯೋಜನೆ ಮಾಡಿದ್ದ ಸಮಾರಂಭವೊಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಈ ವೇಳೆ ಇಬ್ಬರು ಮಾತನಾಡಿದ್ದು, ತಾವು ಅರಮನೆಯ ಜವಾಬ್ದಾರಿಗಳಿಂದ ದೂರು ಉಳಿದು ಸಾಮಾನ್ಯ ಜೀವನ ನಡೆಸಲು ತೀರ್ಮಾನಿಸಿದ್ದು, ಯುಕೆ ಹಾಗೂ ನಾರ್ಥ್ ಅಮೆರಿಕಾದಲ್ಲಿ ಜೀವನ ಸಾಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಹಣಕಾಸು ವಿಚಾರವಾಗಿ ಸ್ವತಂತ್ರರಾಗುವ ಉದ್ದೇಶದಿಂದ ರಾಜಮನೆತನದ ಸೌಲಭ್ಯಗಳನ್ನು ತೊರೆಯುತ್ತಿರುವುದಾಗಿ ಕೆಲ ವಾರಗಳ ಹಿಂದೆ ಹ್ಯಾರಿ ದಂಪತಿ ಘೋಷಿಸಿದ್ದರು. ಇದಕ್ಕೂ ಮುನ್ನ ಅವರು ಸ್ಯಾಂಡ್ರಿಘಾಮ್ ಎಸ್ಟೇಟ್‌ನಲ್ಲಿ ರಾಣಿ ಎಲಿಜಬತ್-2 ಜತೆಗೆ ದೀರ್ಘ ಸಭೆ ನಡೆಸಿ ಕಳೆದ ತಿಂಗಳು ಒಪ್ಪಿಗೆ ಪಡೆದುಕೊಂಡಿದ್ದರು.