ವಾಷಿಂಗ್ಟನ್:ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮೋಫೋಬಿಯಾ (ಇಸ್ಲಾಂ ಬಗ್ಗೆ ಭೀತಿ) ವಿಷಯವನ್ನು ಎತ್ತಿದಾಗ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಅವರ ಇಸ್ಲಾಂ ಧರ್ಮದ ಮೂಲಭೂತವಾದ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ವಿಶ್ಲೇಷಕರು ಖಾನ್ ಅವರ 'ಬೂಟಾಟಿಕೆ' ಮತ್ತು 'ಮುಸ್ಲಿಮರ ವಿರುದ್ಧದ ದ್ವೇಷ'ದ ಬಗ್ಗೆ ಇಬ್ಭಾಗದ ಆಯ್ದ ಹೇಳಿಕೆ ಆಕ್ರೋಶಿಸಿ ಪ್ರಶ್ನಿಸಿದ್ದಾರೆ.
ಚೀನಾದ ಕ್ಸಿನ್ ಜಿಯಾಂಗ್‌ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಅಲ್ಲಿನ ಕಮ್ಯೂನಿಸ್ಟ್ ಸರ್ಕರ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಇಮ್ರಾನ್ ಖಾನ್ ಬಾಯಿ ಬಿಚ್ಚುತ್ತಿಲ್ಲ ಎಂದು ಕುಟುಕಿದ್ದಾರೆ.
ಮುಸ್ಲಿಂ ರಾಷ್ಟ್ರಗಳ ನಾಯಕರಿಗೆ ಇಮ್ರಾನ್ ಖಾನ್ ಇತ್ತೀಚೆಗೆ ಪತ್ರವೊಂದನ್ನು ಬರೆದಿದ್ದು, ಮುಸ್ಲಿಮೇತರ ರಾಷ್ಟ್ರಗಳಲ್ಲಿ ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಬೆಳೆಯುತ್ತಿರುವ ಇಸ್ಲಾಮೋಫೋಬಿಯಾ ಎದುರಿಸಲು ಸಾಮೂಹಿಕವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿಕೊಂಡರು.
ಪ್ರವಾದಿ ಮೊಹಮ್ಮದ್ ಅವರನ್ನು ತರಗತಿಯಲ್ಲಿ ಚಿತ್ರಿಸುವ ವ್ಯಂಗ್ಯಚಿತ್ರಗಳನ್ನು ತೋರಿಸಿದ್ದಕ್ಕಾಗಿ ಶಾಲಾ ಶಿಕ್ಷಕನೊಬ್ಬನನ್ನು 18 ವರ್ಷದ ಯುವಕನ ಶಿರಚ್ಛೇದ ಮಾಡಿದ ನಂತರ ಮ್ಯಾಕ್ರನ್ ಇಸ್ಲಾಂ ಧರ್ಮದ ಮೂಲಭೂತವನ್ನು ಟೀಕಿಸಿದ ಬಳಿಕ ಈ ಪತ್ರ ಬರೆದಿದ್ದಾರೆ.
ಯುರೋಪಿಯನ್ ನಾಯಕ 'ಇಸ್ಲಾಮಿಸ್ಟ್ ಪ್ರತ್ಯೇಕತಾವಾದ'ದ ವಿರುದ್ಧ ಹೋರಾಡುವುದಾಗಿ ವಾಗ್ದಾನ ಮಾಡಿ, ಇದು ಫ್ರಾನ್ಸ್‌ನ ಸುತ್ತಮುತ್ತಲಿನ ಕೆಲವು ಮುಸ್ಲಿಂ ಸಮುದಾಯಗಳಲ್ಲಿ ಹಿಡಿತ ಸಾಧಿಸುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಹೇಳಿದರು.
ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಕೆರಳಿಸುತ್ತಿದ್ದಾರೆ ಎಂದು ಮ್ಯಾಕ್ರನ್ ಹೇಳಿಕೆಯನ್ನು ಇಮ್ರಾನ್ ಖಾನ್ ಖಂಡಿಸಿದ್ದಾರೆ.
ಮೂರು ಮಿಲಿಯನ್ ಉಯಿಗುರ್ಗಳನ್ನು ಚೀನೀಯರು ಕ್ರೂರವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಖಾನ್ ಅವರಿಗೆ ಅನೇಕ ಬಾರಿ ಪ್ರಶ್ನಿಸಲಾಗಿದ್ದು, ಆ ಎಲ್ಲಾ ಪ್ರಶ್ನೆಗಳನ್ನು ನಿರ್ಲಕ್ಷಿಸಿದ್ದಾರೆ. ಪ್ರಪಂಚದ ಬಹುಪಾಲು ಜನರು ಖಂಡಿಸಿರುವ ಘಟನೆಯ ಬಗ್ಗೆ ಖಾನ್ ಮಾತ್ರ ಮೌನವಾಗಿದ್ದಾರೆ.
ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಉಯಿಗರ್ ಮುಸ್ಲಿಮರಿಗೆ ಚೀನಾ ಏನು ಮಾಡುತ್ತಿದೆ ಎಂಬುದಕ್ಕೆ ಪಶ್ಚಿಮದ ಇಸ್ಲಾಮೋಫೋಬಿಯಾ ಕೂಡ ಹತ್ತಿರ ಬರುವುದಿಲ್ಲ. ಚೀನಾ ನಿಮ್ಮ ಹತ್ತಿರದ ಮಿತ್ರ, ಶ್ರೀಯುತ ಪ್ರಧಾನಿ ಅವರು ಅವರಿಗೆ ಪತ್ರ ಬರೆಯುವಿರಾ ಹೇಗೆ? ಎಂದು ರಾಜಕೀಯ ವಿಶ್ಲೇಷಕ ಮೆಹದಿ ಹಸನ್ ಟ್ವೀಟ್ ಮಾಡಿದ್ದಾರೆ.
ಇದರ ನಡುವೆ, ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಇಶಾನ್ ತರೂರ್ ಅವರು ಪಾಕಿಸ್ತಾನ ಪ್ರಧಾನಿಯನ್ನು ಕಪಟಿ ಎಂದು ಕರೆದರು. 'ಇಮ್ರಾನ್ ಖಾನ್ ಅವರಿಗಿಂತ ಹೆಚ್ಚಿನ ಕಪಟಗಾರನನ್ನು ಪತ್ತೆ ಹಚ್ಚುವುದು ನಿಜವಾಗಿಯೂ ಕಷ್ಟಕರ. ಅವರ ಗಡಿಯಲ್ಲಿನ ಕ್ಸಿನ್‌ಜಿಯಾಂಗ್‌ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲವೆಂದು ಅವರೇ ಹೇಳಿಕೊಂಡಿದ್ದಾರೆ. ಆದರೆ, ಯುರೋಪಿನ ಪರಿಸ್ಥಿತಿಯ ಬಗ್ಗೆ ವಿಶಾಲವಾಗಿ ಮಾತಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇಸ್ಲಾಮೋಫೋಬಿಯಾ ವಿರುದ್ಧ ಪ್ರಧಾನಿ ಖಾನ್ ಅವರ ಸಂಕೂಚಿತ ಆಕ್ರೋಶವು ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಚೀನಾ, ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ವಿಷಯ ಬಂದಾಗ ಪಾಕಿಸ್ತಾನ ಮೌನವಾಗುತ್ತದೆ. ಅದರ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ, ಪಾಕ್ ಪ್ರಧಾನಿ ತಮ್ಮ ದೇಶದಲ್ಲಿ ಬಹಳಷ್ಟು ನಡೆಯುತ್ತಿದೆ ಎನ್ನುವ ಮೂಲಕ ಅದನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ.
ಭಯೋತ್ಪಾದನೆ, ಒಳನುಸುಳುವಿಕೆ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಯಾವುದೇ ವಿಧದ ಕರುಣೆ ತೋರಿಸಬೇಡಿ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ದೇಶನದ ಮೇರೆಗೆ, ಚೀನಾ ಕಳೆದ ಮೂರು ವರ್ಷಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ಉಯಿಗರ್ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ಕ್ಸಿನ್‌ಜಿಯಾಂಗ್‌ನ ಬಂಧನ ಶಿಬಿರಗಳು ಮತ್ತು ಕಾರಾಗೃಹಗಳಲ್ಲಿ ಇರಿಸಲಾಗಿದೆ ಎಂದು ಅಮೆರಿಕ ಮಾಧ್ಯಮಗಳು ಹೇಳುತ್ತಿವೆ.