ಕರ್ನಾಟಕ

karnataka

ETV Bharat / international

ವಿಶ್ವದ ನಂಬರ್ 19 ರ‍್ಯಾಂಕ್‌ನ ಟೆ​ನಿಸ್​​​​​​​​​ ಆಟಗಾರನಿಗೆ ಕೊರೊನಾ ಸೋಂಕು....ಯಾರಿವರು?

ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ವಿಶ್ವದ ನಂಬರ್ 19 ರ‍್ಯಾಂಕ್‌ನ ಟೆನಿಸ್​​​​​​​​​ ಆಟಗಾರ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್​ರಲ್ಲಿ ಸೋಂಕು ದೃಢಪಟ್ಟಿದೆ.

Grigor Dimitrov
ಗ್ರಿಗೋರ್ ಡಿಮಿಟ್ರೋವ್

By

Published : Jun 22, 2020, 7:28 AM IST

ಝಾದರ್​(ಕ್ರೊಯೇಷಿಯಾ):ವಿಶ್ವದ 19ನೇ ರ‍್ಯಾಂಕ್‌ನ ಟೆನಿಸ್​ ಆಟಗಾರ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಡ್ರಿಯಾ ಟೂರ್​ನಲ್ಲಿ ಪಾಲ್ಗೊಂಡಿದ್ದ ವೇಳೆ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಈ ಕುರಿತು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಡಿಮಿಟ್ರೋವ್​ ''ನನ್ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ವೇಳೆ ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ನನ್ನಿಂದ ನಿಮಗೇನಾದರೂ ಹಾನಿಯಾಗಿದ್ದರೆ ಕ್ಷಮಿಸಿ. ನಾನು ಮನೆಗೆ ಬಂದು ಈಗ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ.. ಎಲ್ಲರ ಬೆಂಬಲಕ್ಕೆ ಚಿರಋಣಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ'' ಎಂದು ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗ್ರಾಂಡ್​ಸ್ಲ್ಯಾಮ್​ ಸೆಮಿಫೈನಲ್​ ಆಟಗಾರನಾಗಿರುವ ಡಿಮಿಟ್ರೋವ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಟೆನಿಸ್​ ಪಂದ್ಯಗಳನ್ನು ಮಾರ್ಚ್​ನಲ್ಲಿ ಅಂತ್ಯಗೊಳಿಸಲಾಗಿತ್ತು. ಆ ಪಂದ್ಯಗಳನ್ನು ಆಗಸ್ಟ್​ನಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ABOUT THE AUTHOR

...view details