ಕರ್ನಾಟಕ

karnataka

By

Published : Jan 31, 2021, 5:45 PM IST

ETV Bharat / international

ನೊಬೆಲ್​ ಶಾಂತಿ ಪುರಸ್ಕಾರಕ್ಕೆ ಗ್ರೆಟಾ ಥನ್‌ಬರ್ಗ್ ನಾಮನಿರ್ದೇಶನ

ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆ ವಿರುದ್ಧ ಆಂದೋಲನ ನಡೆಸಿದ ಸ್ವೀಡಿಶ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹೆಸರು ಈ ಬಾರಿಯ ನೊಬೆಲ್​ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.

ಗ್ರೆಟಾ ಥನ್‌ಬರ್ಗ್
ಗ್ರೆಟಾ ಥನ್‌ಬರ್ಗ್

ಓಸ್ಲೋ: ಹವಾಮಾನ ವೈಪರೀತ್ಯ ಕುರಿತಂತೆ ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವ ಸ್ವೀಡನ್​ನ ಪರಿಸರ ಕಾರ್ಯಕರ್ತೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹೆಸರು ಈ ಬಾರಿಯ ನೊಬೆಲ್​ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.

ಹವಾಮಾನ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸಿದವರಲ್ಲಿ ಥನ್‌ಬರ್ಗ್ ಅಗ್ರಗಣ್ಯ. ಇವರು ನೂರಾರು ಶಾಲೆಗಳಿಗೆ ತೆರಳಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಹವಾಮಾನ ಬದಲಾವಣೆ ಕುರಿತು ಕ್ರಮ ಕೈಗೊಳ್ಳುವಂತೆ ನಾಯಕರಲ್ಲಿ ಮನವಿ ಮಾಡಿ ಈ ಹಿಂದೆ ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಜೊತೆಗೆ ಕೊರೊನಾ ವೈರಸ್​ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿರುವುದು ಮತ್ತು ಬಡ ದೇಶಗಳಿಗೆ ಕೊರೊನಾ ಲಸಿಕೆ ಹಂಚಿಕೆಯಲ್ಲಿ ಇವರು ಮಾಡಿರುವ ಕಾರ್ಯವನ್ನು ಗುರುತಿಸಿ ಥನ್‌ಬರ್ಗ್​ ಹೆಸರನ್ನು ನೊಬೆಲ್ ಶಾಂತಿ​ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಇನ್ನು ನಾರ್ವೇಜಿಯನ್ ನೊಬೆಲ್ ಸಮಿತಿ ಪ್ರತಿ ವರ್ಷ ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ.

ABOUT THE AUTHOR

...view details