ಕರ್ನಾಟಕ

karnataka

ETV Bharat / international

'ನೊಬೆಲ್ ಶಾಂತಿ ಪುರಸ್ಕಾರ'ದ ರೇಸ್​ನಲ್ಲಿ 16 ರ ಬಾಲಕಿ... ಸಾಧಿಸಿದ್ದಾದರೂ ಏನು?

ಈ ವರ್ಷ ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆ ವಿರುದ್ಧ ಅಭಿಯಾನವನ್ನೇ ಆರಂಭಿಸಿದ ಸ್ವೀಡನ್ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

Peace

By

Published : Mar 16, 2019, 3:27 PM IST

ಕೋಪೆನ್​ಹೇಗನ್: ನೊಬೆಲ್ ಪ್ರಶಸ್ತಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸುವುದು ಮತ್ತು ಸುದ್ದಿಯಾಗುವುದು ಶಾಂತಿ ಪುರಸ್ಕಾರ. ಸಮಾಜದ ಶಾಂತಿ ಸಾಮರಸ್ಯಕ್ಕಾಗಿ ಸೇವೆ ಸಲ್ಲಿಸಿದ ಸಾಧಕರು ಈ ಪುರಸ್ಕಾರಕ್ಕೆ ಭಾಜನರಾಗುತ್ತಾರೆ.

ಆದರೆ, ಈ ವರ್ಷ ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಅಭಿಯಾನವನ್ನೇ ಆರಂಭಿಸಿದ ಸ್ವೀಡನ್ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.

ನಾರ್ವೆ ದೇಶದ ಸಂಸದರು ಆಕೆಯಲ್ಲಿನ ಪರಿಸರದ ಬಗೆಗಿನ ಕಾಳಜಿ ಹಾಗೂ ಕೆಲಸಗಳನ್ನು ಪರಿಗಣಿಸಿ ಅವಳ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

2018ರ ಆಗಸ್ಟ್​ನಲ್ಲಿ ಒಂಟಿಯಾಗಿ ಹೋರಾಟ ಆರಂಭಿಸಿದ ತುಂಬರ್ಗ್, ಹಲವು ರಾಷ್ಟ್ರಗಳ ಕೋಟ್ಯಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಳೆದ ವರ್ಷ ಸ್ವೀಡನ್ ಸಂಸತ್ತಿನ ಮುಂಭಾಗ 'ಶಾಲಾ ಮುಷ್ಕರ' (ಸ್ಕೂಲ್ ಸ್ಟ್ರೈಕ್) ನಡೆಸಿದರು. ಇದು ಭಾರಿ ಸುದ್ದಿಯಾಗಿ 'ಹವಾಮಾನಕ್ಕಾಗಿ ಶಾಲಾ ಮುಷ್ಕರ' ಎಂಬ ಘೋಷಣೆ ಮೊಳಗಿಸಿದಳು. ಇದು ರಾಷ್ಟ್ರದಾದ್ಯಂತ ಪ್ರಚಾರ ಪಡೆದು ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿತು.

ಮಾರ್ಚ್​ನಲ್ಲಿ 105 ರಾಷ್ಟ್ರಗಳ 1,600 ನಗರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು 16 ವರ್ಷ ಪ್ರಾಯದ ಬಾಲಕಿಗೆ ಬೆನ್ನೆಲುಬಾಗಿ 'ಹವಾಮಾನ ಬದಲಾವಣೆಯ ಮೇಲೆ ತುರ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಪೋಲೆಂಡ್ ಹಾಗೂ ದಾವೋಸ್​ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಮಾಡಿದ್ದ ಭಾಷಣಗಳು ತುಂಬರ್ಗ್ ಅವರನ್ನು ವಿಶ್ವದಾದ್ಯಂತ ಅವಳ ದನಿಗೆ ದೊಡ್ಡ ವೇದಿಕೆ ಸಿಕ್ಕಿತು. ಜೊತೆಗೆ ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

For All Latest Updates

TAGGED:

ABOUT THE AUTHOR

...view details