ಅಥೆನ್ಸ್: ಗ್ರೀಕ್‌ನ ಕ್ರೀಟ್ ದ್ವೀಪದಲ್ಲಿ ಮಂಗಳವಾರ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರಭಲ ಭೂಕಂಪವಾಗುವ ಸಾಧ್ಯತೆ ಇದೆ ಎಂದು ಅಥೆನ್ಸ್-ಮೆಸಿಡೋನಿಯನ್ ಸುದ್ದಿ ಸಂಸ್ಥೆ (ANA-MPA) ಬುಧವಾರ ವರದಿ ಮಾಡಿದೆ.
ಮಂಗಳವಾರ ಕ್ರೀಟ್ ಕರಾವಳಿಯಲ್ಲಿ ಸಂಭವಿಸಿದ ಭೂಕಂಪದ ನಂತರ, ಮತ್ತೇ ದ್ವೀಪದಲ್ಲಿ ಕ್ರಮವಾಗಿ 4 ಮತ್ತು 4.4 ರ ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಇಪಿಪಿಒ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಪ್ರಭಲ ಭೂಕಂಪವಾಗುವ ಸಂಭವವಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ ಎಂದು ANA-MPA ಹೇಳಿದೆ.