ಪ್ಯಾರಿಸ್: ಕೊರೊನಾ ವೈರಸ್ ಕಬಂಧಬಾಹು ನಿಲ್ಲಿಸುವ ಗುರಿಯೊಂದಿಗೆ ವಿಶ್ವದಾದ್ಯಂತ ಲಾಕ್ಡೌನ್ಗಳು ವಿಸ್ತರಣೆಯಾಗಿದೆ. ಈಗಾಗಲೇ ಕೊರೊನಾ ಸಾವಿನ ಸಂಖ್ಯೆ 37,000 ದಾಟಿದ್ದು, ಯುಎಸ್ಎ ಸೇರಿದಂತೆ ಪ್ರಮುಖ ರಾಷ್ಟ್ರಗಳು ವೈರಸ್ ನಿಯಂತ್ರಣದ ಪ್ರಯತ್ನಗಳಲ್ಲಿ ವಿಫಲವಾಗಿದೆ.
ವೈರಸ್ ಅಟ್ಟಹಾಸದಿಂದ ಆಘಾತಕ್ಕೊಳಗಾಗಿರುವ ಇಟಲಿ ಮತ್ತು ಸ್ಪೇನ್ನಲ್ಲಿ ಈಗ ಭರವಸೆಯ ಅಲೆಗಳೇ ಮಾಯವಾಗಿದೆ. ಇಟಲಿಯ ಲಾಕ್ಡೌನ್ ಕನಿಷ್ಠ ಏಪ್ರಿಲ್ 12ರವರೆಗೆ ಮುಂದುವರಿಯಲಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಎರಡು - ಐದನೇ ಭಾಗದಷ್ಟು ಜನಸಂಖ್ಯೆ ಮನೆಯೊಳಗೆ ಬಂಧಿಯಾಗಿದೆ.
ರಷ್ಯಾದ ಮಾಸ್ಕೋ ಮತ್ತು ನೈಜೀರಿಯಾದ ಲಾಗೋಸ್ ನಗರವು ಸೋಮವಾರ ಖಾಲಿ ಬೀದಿಗಳೊಂದಿಗೆ ಕಾಣಿಸಿಕೊಂಡಿತು. ಅಮೆರಿಕದ ವರ್ಜೀನಿಯಾ, ಮೇರಿಲ್ಯಾಂಡ್ ಮತ್ತು ಕಾನ್ಸಾಸ್ ನಗರಗಳಲ್ಲಿ ಇತ್ತೀಚೆಗೆ ತರ್ತು ಲಾಕ್ಡೌನ್ ಘೋಷಿಸಲಾಯ್ತು.
ಇನ್ನೊಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮೇಲಿನ ಅತಿಯಾದ ಒತ್ತಡವನ್ನು ನಿವಾರಿಸಲು ಯುಎಸ್ ಮಿಲಿಟರಿ ವೈದ್ಯಕೀಯ ಹಡಗು ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿತು. ಈ ನಗರವೊಂದರಲ್ಲೇ ಅಮೆರಿಕಾದ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.
ಕೊರೊನಾ ಸೋಂಕಿನಿಂದಾಗಿ ವಿಶ್ವದ ಕೆಲ ನಾಯಕರು ಬಲಿಯಾಗಿದ್ದು, ಇನ್ನೂ ಕೆಲವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಎರಡನೆಯ ಮಹಾಯುದ್ಧದ ನಂತರ ಕಂಡ ಆರ್ಥಿಕ ಮತ್ತು ಸಾಮಾಜಿಕ ಆಘಾತವಾರುವ ಈ ಬಿಕ್ಕಟ್ಟನ್ನು ಎದುರಿಸುವ ಪ್ರಬಲ ಮಾರ್ಗಗಳಿಗಾಗಿ ಹಲವು ಪ್ರಮುಖ ನಾಯಕರು ನಿರಂತರವಾಗಿ ಹೋರಾಡುತ್ತಿದ್ದಾರೆ.