ಕರ್ನಾಟಕ

karnataka

ETV Bharat / international

ಜಾಗತಿಕ ಕೋವಿಡ್ ಸೋಂಕು ಗರಿಷ್ಠ ಪ್ರಮಾಣಕ್ಕೆ ತಲುಪಿದೆ : ಡಬ್ಲ್ಯುಹೆಚ್‌ಒ ಆತಂಕ - ಕೋವಿಡ್ ಹೆಚ್ಚಳ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ವಿಶ್ವದಾದ್ಯಂತ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆ ಕಳೆದ ಎರಡು ತಿಂಗಳಲ್ಲಿ ದ್ವಿಗುಣಗೊಂಡಿದೆ ಎಂದು ಪ್ರಕಟಿಸಿದೆ. ಇದು ಸಾಂಕ್ರಾಮಿಕದ ಸಮಯದಲ್ಲಿ ಇದುವರೆಗೆ ಕಂಡುಬಂದ ಅತಿ ಹೆಚ್ಚು ಸೋಂಕಿನ ಪ್ರಮಾಣ ಎಂದು ಹೇಳಿದೆ.

Global Covid infection rate approaching highest
ಜಾಗತಿಕ ಕೋವಿಡ್ ಪ್ರಮಾಣ

By

Published : Apr 17, 2021, 12:23 PM IST

ಜಿನೀವಾ (ಸ್ವಿಟ್ಜರ್​ಲ್ಯಾಂಡ್ ) : ಕಳೆದ ಎರಡು ತಿಂಗಳಲ್ಲಿ ವಿಶ್ವದಾದ್ಯಂತ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಕೋವಿಡ್ ಹರಡಲು ಪ್ರಾರಂಭವಾದ ಬಳಿಕ ಇದುವರೆಗೂ ಇಷ್ಟು ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ತಿಳಿಸಿದೆ.

ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ವ್ಯಾಪಕವಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿದ್ದ ಕೆಲ ದೇಶಗಳಲ್ಲೂ ಕೂಡ ಈ ಬಾರಿ ಸೋಂಕು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೇಗವಾಗಿ ಹರಡುತ್ತಿರುವ ರೂಪಾಂತರಿ ಸೋಂಕು, ಕೋವಿಡ್ ಮುಂಜಾಗ್ರತ ಕ್ರಮಗಳ ಸಡಿಲಗೊಳಿಸುವಿಕೆ ಮತ್ತು ಲಸಿಕೆ ಹಂಚಿಕೆಯಲ್ಲಿನ ತಾರತಮ್ಯ ಸೋಂಕು ಹೆಚ್ಚಲು ಕಾರಣವಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಲಸಿಕೆ ವಿತರಣೆಯಲ್ಲಿ ಅಸಮಾನತೆ ನಮ್ಮ ಮುಂದಿರುವ ಸವಾಲು ಅದನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿದ್ದೇವೆ. ಡಬ್ಲ್ಯುಹೆಚ್‌ಒ ಅಂಕಿ ಅಂಶಗಳು ಜಾಗತಿಕವಾಗಿ 832 ದಶ ಲಕ್ಷ ಡೋಸ್​ ಕೋವಿಡ್ ಲಸಿಕೆ ಅತಿದೊಡ್ದ, ದೊಡ್ಡ ಮತ್ತು ಮಧ್ಯಮ ಆರ್ಥಿಕತೆಯ ದೇಶಗಳಿಗೆ ಹೋಗಿವೆ. ಕಡಿಮೆ ಆದಾಯದ ದೇಶಗಳಿಗೆ ಶೇ.0.2 ರಷ್ಟು ಮಾತ್ರ ಲಸಿಕೆ ಹಂಚಿಕೆಯಾಗಿವೆ. ಈ ಅಸಮಾನತೆ ಕೇವಲ ಲಸಿಕೆ ಹಂಚಿಕೆ ಮಾತ್ರವಲ್ಲದೆ ಆರ್ಥಿಕ ಮತ್ತು ರೋಗ ನಿರ್ವಹಣೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details