ಕರ್ನಾಟಕ

karnataka

ETV Bharat / international

ವಿಶ್ವದಲ್ಲಿ 98,98,220ಕ್ಕೇರಿದ ಸೋಂಕಿತರ ಸಂಖ್ಯೆ: ವಿದೇಶಗಳಿಂದ ಬಂದವರಿಂದಲೇ ಹೆಚ್ಚಿದ ಕೇಸ್​ - ಕೊರೊನಾ ಪ್ರಕರಣಗಳು

ಸಾವಿರಾರು ಜನ ವಿದೇಶಗಳಿಂದ ಹಿಂದಿರುಗಿದ ಹಿನ್ನೆಲೆ ಕೊರೊನಾ ಪ್ರಕರಣಗಳು ಮತ್ತಷ್ಟು ಉಲ್ಬಣವಾಗಬಹುದು ಎಂದು ಆಸ್ಟ್ರೇಲಿಯಾದ ಆರೋಗ್ಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಹೋಟೆಲ್​ ಕ್ವಾರಂಟೈನ್​ ಆಗಿರುವ ಜನರ ಕೋವಿಡ್​​ ಪರೀಕ್ಷೆಯನ್ನು ಅವರ 14 ದಿನಗಳ ಕ್ವಾರಂಟೈನ್​ ಅವಧಿ ಆರಂಭ ಮತ್ತು ಅಂತ್ಯಗೊಳ್ಳುವ ವೇಳೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

tracker
ಕೊರೊನಾ ಪ್ರಕರಣಗಳು ಹೆಚ್ಚಳ

By

Published : Jun 27, 2020, 10:13 AM IST

ಹೈದರಾಬಾದ್​​:ಕೊರೊನಾ ವೈರಸ್​​ ಪ್ರಪಂಚಾದ್ಯಂತ 98,98,220 ಜನರನ್ನ ಬಾಧಿಸಿದ್ದು, 4,96,077 ಜನರನ್ನು ಬಲಿ ಪಡೆದಿದೆ. ಈವರೆಗೆ ಸುಮಾರು 53,50,904 ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

ನೂರಾರು ಜನ ವಿದೇಶಗಳಿಂದ ಹಿಂದಿರುಗಿದ ಹಿನ್ನೆಲೆ ಕೊರೊನಾ ಪ್ರಕರಣಗಳು ಮತ್ತಷ್ಟು ಉಲ್ಬಣವಾಗಬಹುದು ಎಂದು ಆಸ್ಟ್ರೇಲಿಯಾದ ಆರೋಗ್ಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಳ

ಮುಂಬೈಯಿಂದ ಈ ವಾರಾಂತ್ಯದಲ್ಲಿ ಸುಮಾರು 300 ಜನರು ಅಡಿಲೇಡ್‌ಗೆ ಆಗಮಿಸಲಿದ್ದು, ದಕ್ಷಿಣ ಅಮೆರಿಕ ಮತ್ತು ಇಂಡೋನೇಷ್ಯಾದಿಂದ ನೂರಾರು ಜನ ಆಗಮಿಸುವ ಸಾಧ್ಯತೆ ಇದೆ. ಹೋಟೆಲ್​ ಕ್ವಾರಂಟೈನ್​ ಆಗಿರುವ ಜನರ ಕೋವಿಡ್​​ ಪರೀಕ್ಷೆಯನ್ನು ಅವರ 14 ದಿನಗಳ ಕ್ವಾರಂಟೈನ್​ ಅವಧಿ ಆರಂಭ ಮತ್ತು ಅಂತ್ಯಗೊಳ್ಳುವ ವೇಳೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾ ರಾಜ್ಯ ಆರೋಗ್ಯ ಸಚಿವ ಸ್ಟೀಫನ್ ವೇಡ್ ಹೇಳುವಂತೆ ವಿದೇಶಗಳಿಂದ ಹಿಂತಿರುಗಿದವರಲ್ಲಿ ಸುಮಾರು ಶೇ 5 ರಿಂದ ಶೇ10 ರಷ್ಟು ಜನ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆಯಂತೆ. ಮೆಲ್ಬೋರ್ನ್​​ನಲ್ಲಿ ನಿನ್ನೆ 30 ಹೊಸ ಕೋವಿಡ್​​ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 183 ಕ್ಕೆ ಏರಿದೆ. ಕೇವಲ ಒಂದು ವಾರದಲ್ಲಿ ಸೋಂಕಿತ ಪ್ರಕರಣಗಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.

ABOUT THE AUTHOR

...view details