ಫ್ರಾಂಕ್‌ಫರ್ಟ್ (ಜರ್ಮನಿ):ಹ್ಯಾಂಬರ್ಗ್ ನಗರದಲ್ಲಿ ಜರ್ಮನ್ ರೈಲು ಆಪರೇಟರ್ ಡಾಯ್ಚ್ ಬಾನ್(Deutsche Bahn) ಮತ್ತು ಸೀಮೆನ್ಸ್ (Siemens) ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಸ್ವಯಂಚಾಲಿತ (ಚಾಲಕರಹಿತ) ರೈಲು ಅನಾವರಣಗೊಂಡಿದೆ.
ಇದು ಸಾಂಪ್ರದಾಯಿಕ ರೈಲುಗಳಿಗಿಂತ ಹೆಚ್ಚು ಸಮಯಪಾಲನೆ ಮತ್ತು ಇಂಧನ ದಕ್ಷತೆ ಹೊಂದಿದೆ. ಇಂಥ ನಾಲ್ಕು ಚಾಲಕರಹಿತ ರೈಲುಗಳು ಉತ್ತರ ನಗರದ ಎಸ್-ಬಹನ್ನಲ್ಲಿ ಸೇರಲಿವೆ. ಅಸ್ತಿತ್ವದಲ್ಲಿರುವ ರೈಲು ಮೂಲ ಸೌಕರ್ಯವನ್ನು ಬಳಸಿಕೊಂಡು ಡಿಸೆಂಬರ್ನಿಂದ ಪ್ರಯಾಣಿಕರನ್ನು ಸಾಗಿಲು ಪ್ರಾರಂಭಿಸುತ್ತವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾಯ್ಚ್ ಬಾನ್ ಸಿಇಒ ರಿಚರ್ಡ್ ಲುಟ್ಜ್, 'ಇದು 60 ಮಿಲಿಯನ್ ಡಾಲರ್(70 ಮಿಲಿಯನ್ ಡಾಲರ್) ವೆಚ್ಚದ ಯೋಜನೆ. ಈ ರೈಲುಗಳು ಪ್ರಯಾಣಿಕರಿಗೆ ವಿಶ್ವಾಸಾರ್ಹ ಸೇವೆ ನೀಡಲಿವೆ' ಎಂದು ಹೇಳಿದರು.