ಕರ್ನಾಟಕ

karnataka

ETV Bharat / international

ನಾರ್ವೆಯಲ್ಲಿ ಕಂಡು ಬಂದಿದ್ದ ರೂಪಾಂತರಿ ಕೊರೊನಾ ವೈರಸ್​ ಈಗ ಹಾಲೆಯಲ್ಲಿ ಪತ್ತೆ

ಬಿ.1.1.6 ಎಂದು ಕರೆಯಲ್ಪಡುವ ರೂಪಾಂತರಿ ಕೊರೊನಾ ವೈರಸ್​​ನ ಪ್ರಕರಣವೊಂದು ಜರ್ಮನಿಯ ಕೇಂದ್ರ ನಗರ ಹಾಲೆನಲ್ಲಿ ಪತ್ತೆಯಾಗಿದೆ. ಈ ಹಿಂದೆ ಇಂತಹ ಕೇಸ್​ಗಳು ನಾರ್ವೆ ಮತ್ತು ಲಕ್ಸೆಂಬರ್ಗ್‌ನಲ್ಲಿ ಕಂಡು ಬಂದಿದ್ದವು.

ರೂಪಾಂತರಿ ಕೊರೊನಾ ವೈರಸ್
New Coronavirus

By

Published : Feb 5, 2021, 12:22 PM IST

ಬರ್ಲಿನ್ (ಜರ್ಮನಿ): ಬಿ.1.1.6 ಎಂದು ಕರೆಯಲ್ಪಡುವ ರೂಪಾಂತರಿ ಕೊರೊನಾ ವೈರಸ್​​ನ ಪ್ರಕರಣವೊಂದು ಜರ್ಮನಿಯ ಕೇಂದ್ರ ನಗರ ಹಾಲೆನಲ್ಲಿ ಪತ್ತೆಯಾಗಿದೆ ಎಂದು ಮೇಯರ್ ಬರ್ನ್ಡ್ ವೈಗಾಂಡ್ ಹೇಳಿದ್ದಾರೆ.

ಸ್ಥಳೀಯ ಆಸ್ಪತ್ರೆ ಉದ್ಯೋಗಿಯೊಬ್ಬರಲ್ಲಿ ಪತ್ತೆಯಾಗಿದ್ದು, ಅವರನ್ನು ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈಕೆಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಹಿಂದೆ ನಾರ್ವೆ ಮತ್ತು ಲಕ್ಸೆಂಬರ್ಗ್‌ನಲ್ಲಿ ರೂಪಾಂತರಿ ಕೊರೊನಾ ವೈರಸ್​ ಪ್ರಕರಣಗಳು ಕಂಡು ಬಂದಿದ್ದವು ಎಂದರು.

ಓದಿ: ‘ಭಯೋತ್ಪಾದನೆ, ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ’

ನಾರ್ವೇಜಿಯನ್ ಅಥವಾ ಲಕ್ಸೆಂಬರ್ಗನ್ ಎಂದು ಕರೆಯಲ್ಪಡುವ ಈ ರೂಪಾಂತರ ಕೊರೊನಾ ವೈರಸ್​ ಅತೀ ಹೆಚ್ಚಿನ ಸೋಂಕಿನ ಪ್ರಮಾಣ ಹೊಂದಿದ್ದು, ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಬಿ .1.1.6 ರೂಪಾಂತರ ವೈರಸ್​​​ 2020ರ ಕೊನೆಯಲ್ಲಿ ಲಕ್ಸೆಂಬರ್ಗ್‌ನಲ್ಲಿ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ.

ABOUT THE AUTHOR

...view details