ನವದೆಹಲಿ: ಇತ್ತೀಚೆಗಷ್ಟೇ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಈಗ ಜರ್ಮನಿ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ಅವರ ಸರದಿ. ಅವರು ಇದೇ ತಿಂಗಳ 31ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ.
ತಿಂಗಳಾಂತ್ಯದಲ್ಲಿ ಜರ್ಮನಿ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ಭಾರತಕ್ಕೆ ಭೇಟಿ - ಭಾರತಕ್ಕೆ ಆಂಜೆಲಾ ಮಾರ್ಕೆಲ್
ತಿಂಗಳಾಂತ್ಯಕಗ್ಕೆ ಜರ್ಮನಿ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
![ತಿಂಗಳಾಂತ್ಯದಲ್ಲಿ ಜರ್ಮನಿ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ಭಾರತಕ್ಕೆ ಭೇಟಿ](https://etvbharatimages.akamaized.net/etvbharat/prod-images/768-512-4847144-thumbnail-3x2-brm.jpg)
ಆ್ಯಂಜೆಲಾ ಮಾರ್ಕೆಲ್
ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಅವರು, ಭಾರತದ ಜೊತೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಬಹುತೇಕ ಮುಂದುವರಿದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಬಯಸುವ ಮೋದಿ, ಮರ್ಕೆಲ್ ಭೇಟಿ ಮೂಲಕ ಮತ್ತಷ್ಟು ಸ್ನೇಹ ಸಂಬಂಧ ವೃದ್ಧಿ ಮಾಡಿಕೊಳ್ಳುವ ಸಾಧ್ಯತೆ ಇದೆ.