ಕರ್ನಾಟಕ

karnataka

ETV Bharat / international

ಭಾರತ-ಇಂಗ್ಲೆಂಡ್​ 2 ನೇ ಟೆಸ್ಟ್ ಪಂದ್ಯ ವೀಕ್ಷಿಸಿದ ಗಂಗೂಲಿ.. ಕ್ರಿಕೆಟ್​ ಗುಣಗಾನ ಮಾಡಿದ ದಾದಾ! - ಟೆಸ್ಟ್ ಪಂದ್ಯ ವೀಕ್ಷಿಸಿದ ಗಂಗೂಲಿ

ಭಾರತ - ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ವೀಕ್ಷಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟ್ ಒಂದು ಅದ್ಭುತ ಆಟ ಎಂದು ಗುಣಗಾನ ಮಾಡಿದ್ದಾರೆ.

ಗಂಗೂಲಿ
ಗಂಗೂಲಿ

By

Published : Aug 13, 2021, 4:41 PM IST

Updated : Aug 13, 2021, 5:40 PM IST

ಲಂಡನ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಆರಂಭಿಕ ದಿನವನ್ನು ವೀಕ್ಷಿಸಿದರು.

ಈ ಬಗ್ಗೆ ತಮ್ಮ ಇನ್​​ಸ್ಟಾದಲ್ಲಿ ಕೊಲಾಜ್​ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ‘1996ರಲ್ಲಿ ಆಟಗಾರನಾಗಿ ಇಲ್ಲಿಗೆ ಬಂದೆ. ಬಳಿಕ ಕ್ಯಾಪ್ಟನ್​ ಆಗಿ ಬಂದೆ. ಭಾರತವು ಅಂದಿನಿಂದಲೂ ಉತ್ತಮ ಆಟ ಪ್ರದರ್ಶಿಸುತ್ತಿದೆ. ಈ ಕ್ರಿಕೆಟ್ ಒಂದು ಅದ್ಭುತವಾಗಿದೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಗಂಗೂಲಿ ಹಾಜರಿದ್ದರು.

ಇದನ್ನೂ ಓದಿ: ಲಾರ್ಡ್ಸ್​​ನಲ್ಲಿ ದಾಖಲೆಗಳ ಸುರಿಮಳೆಗೈದ ಕನ್ನಡಿಗ...129ರನ್​ಗಳಿಸಿ ವಿಕೆಟ್​ ಒಪ್ಪಿಸಿದ ರಾಹುಲ್​!

ಫೋಟೋದಲ್ಲಿ ಜಯ್​ ಶಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಜೊತೆಯಲ್ಲಿ ಕುಳಿತಿದ್ದು, ಗಂಗೂಲಿ ಇಂಗ್ಲೆಂಡ್ ದಂತಕಥೆ ಜೆಫ್ರಿ ಬಾಯ್ಕಾಟ್ ಜೊತೆ ಸಂಭಾಷಣೆ ನಡೆಸುತ್ತಿರುವುದು ಕಂಡು ಬಂದಿದೆ.

Last Updated : Aug 13, 2021, 5:40 PM IST

ABOUT THE AUTHOR

...view details