ಕರ್ನಾಟಕ

karnataka

ETV Bharat / international

ಎಚ್ಐವಿ ಸೋಂಕು ಅನ್ವೇಷಕ, ನೊಬೆಲ್​ ಪ್ರಶಸ್ತಿ ವಿಜೇತ ಲುಕ್ ಮಾಂಟಾಗ್ನಿಯರ್ ಇನ್ನಿಲ್ಲ - ಲುಕ್ ಮಾಂಟಾಗ್ನಿಯರ್ ಸಾಧನೆಗಳು

ಎಚ್​ಐವಿ ಸೋಂಕು ಕಂಡುಹಿಡಿಯುವ ಮೂಲಕ ಪ್ರತಿಷ್ಠಿತ ನೊಬೆಲ್​ ಗೌರವ ಪಡೆದ ಫ್ರೆಂಚ್‌ ವಿಜ್ಞಾನಿ ಲುಕ್​ ಮೊಂಟಾಗ್ನಿಯರ್​ ನಿಧನ ಹೊಂದಿದ್ದಾರೆ.

HIV discoverer Luc Montagnier has died, Luc Montagnier achievements, Luc Montagnier died news,  ಎಚ್ಐವಿ ಅನ್ವೇಷಕ ಲುಕ್ ಮಾಂಟಾಗ್ನಿಯರ್ ನಿಧನ, ಲುಕ್ ಮಾಂಟಾಗ್ನಿಯರ್ ಸಾಧನೆಗಳು, ಲುಕ್ ಮಾಂಟಾಗ್ನಿಯರ್ ಸಾವು ಸುದ್ದಿ,
ಎಚ್ಐವಿ ಅನ್ವೇಷಕ,ನೊಬೆಲ್​ ವಿಜೇತ ಲುಕ್ ಮಾಂಟಾಗ್ನಿಯರ್ ಇನ್ನಿಲ್ಲ

By

Published : Feb 11, 2022, 8:13 AM IST

ಪ್ಯಾರಿಸ್:ಎಚ್‌ಐವಿ ಸೋಂಕು ಕಂಡುಹಿಡಿದಿದ್ದಕ್ಕೆ 2008ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಫ್ರೆಂಚ್ ಸಂಶೋಧಕ, ವಿಜ್ಞಾನಿ ಲುಕ್ ಮೊಂಟಾಗ್ನಿಯರ್ (89) ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ರಾಜಧಾನಿಯ ಪಶ್ಚಿಮ ಉಪನಗರವಾದ ನ್ಯೂಲ್ಲಿ-ಸುರ್-ಸೈನ್‌ನಲ್ಲಿರುವ ಅಮೆರಿಕನ್ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಮೊಂಟಾಗ್ನಿಯರ್ ನಿಧನರಾದರು ಎಂದು ತಿಳಿದು ಬಂದಿದೆ. ಆದ್ರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

1932ರಲ್ಲಿ ಮಧ್ಯ ಫ್ರಾನ್ಸ್‌ನ ಚಾಬ್ರಿಸ್ ಗ್ರಾಮದಲ್ಲಿ ಜನಿಸಿದ ಮಾಂಟಾಗ್ನಿಯರ್ ವೈರಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 1983ರಲ್ಲಿ ಏಡ್ಸ್‌ಗೆ ಕಾರಣವಾಗುವ ಮಾನವ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ (ಎಚ್‌ಐವಿ) ಅನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದಾರೆ. ಈ ಮೂಲಕ 2008ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ-ಸಿನೋಸ್ಸಿ ಜೊತೆ ಹಂಚಿಕೊಳ್ಳಲು ಕಾರಣವಾಯಿತು.

ಇದನ್ನೂ ಓದಿ:RT-PCR, ಕ್ವಾರಂಟೈನ್​ ಕಡ್ಡಾಯವಲ್ಲ: ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ರಿಲೀಸ್​

ನೊಬೆಲ್ ಪ್ರಶಸ್ತಿ ವೆಬ್‌ಸೈಟ್‌ನಲ್ಲಿರುವ ಇವರ ಆತ್ಮಚರಿತ್ರೆಯ ಪ್ರಕಾರ, ಮೊಂಟಾಗ್ನಿಯರ್ ಪೊಯಿಟಿಯರ್ಸ್ ಮತ್ತು ಪ್ಯಾರಿಸ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದಾರೆ. 1960ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ (CNRS)ಗೆ ಸೇರಿದರು ಮತ್ತು 1972 ರಲ್ಲಿ ಪಾಶ್ಚರ್ ಇನ್ಸ್ಟಿಟ್ಯೂಟ್‌ನ ವೈರಾಲಜಿ ವಿಭಾಗದ ಮುಖ್ಯಸ್ಥರಾಗಿ ನೇಮಕವಾದರು.

1983ರಲ್ಲಿ ಪಾಶ್ಚರ್ ಇನ್‌ಸ್ಟಿಟ್ಯೂಟ್‌ನಲ್ಲಿ ಇವರ ನೇತೃತ್ವದ ಕಾರ್ಯನಿರತ ಸಂಶೋಧಕರ ತಂಡ ವೈರಸ್ ಅನ್ನು ಪ್ರತ್ಯೇಕಿಸಿತು ಮತ್ತು ಅದು ನಂತರ ಎಚ್‌ಐವಿ ಎಂದು ಕರೆಯಲ್ಪಟ್ಟಿತು. ಬಳಿಕ ಅದು ಹೇಗೆ ಏಡ್ಸ್‌ಗೆ ಕಾರಣವಾಯಿತು ಎಂಬುದನ್ನೂ ವಿವರಿಸಲು ಸಾಧ್ಯವಾಯಿತು.

ಅಮೆರಿಕನ್ ವಿಜ್ಞಾನಿ ರಾಬರ್ಟ್ ಗ್ಯಾಲೋ ಅವರು ಅದೇ ಸಮಯದಲ್ಲಿ ಅದೇ ವೈರಸ್ ಅನ್ನು ಕಂಡುಹಿಡಿದಿದ್ದಾರೆ ಎಂದು ಹೇಳಿಕೊಂಡರು. ಹೀಗಾಗಿ, ಯಾವ ವ್ಯಕ್ತಿಗೆ ಇದರ ಶ್ರೇಯ ಸಲ್ಲಬೇಕು ಎಂಬುದರ ಕುರಿತು ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ 1987ರಲ್ಲಿ ಏಡ್ಸ್‌ ಪರೀಕ್ಷೆಗಾಗಿ ಪೇಟೆಂಟ್ ವಿವಾದವನ್ನು ಇತ್ಯರ್ಥಪಡಿಸಿಕೊಂಡವು. ಇದಾದ ಬಳಿಕ ಮೊಂಟಗ್ನಿಯರ್ ಈ ವೈರಸ್ ಕಂಡುಹಿಡಿದವರು ಎಂದು ಮನ್ನಣೆ ಪಡೆದರು.

ಇತ್ತೀಚೆಗೆ ಇವರು ಕೊರೊನಾವೈರಸ್​ ಬಗ್ಗೆ ಸುಳ್ಳು ಹೇಳಿಕೆ ನೀಡಿ ವ್ಯಾಪಕ ಟೀಕೆಗಳಿಗೂ ಗುರಿಯಾಗಿದ್ದರು.

ABOUT THE AUTHOR

...view details