ಕರ್ನಾಟಕ

karnataka

ETV Bharat / international

ಲಾಲಾರಸ ಆಧಾರಿತ ಕೋವಿಡ್-19 ಪರೀಕ್ಷೆಗಾಗಿ 'ಈಸಿಕಾವ್'‌ ಉತ್ಪಾದನೆಗೆ ಮುಂದಾದ ಫ್ರೆಂಚ್ ಕಂಪನಿ! - ಈಸಿಕಾವ್

ಪರೀಕ್ಷೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿಯ ನಾಲಿಗೆಯಿಂದ 1 ಮಿಲಿಗಿಂತ ಕಡಿಮೆ ಲಾಲಾರಸವನ್ನು ಸಂಗ್ರಹಿಸುತ್ತಾರೆ. ನಂತರ ಮಾದರಿಯನ್ನು ಎರಡು ಟ್ಯೂಬ್‌ಗಳಲ್ಲಿ 65 ಡಿಗ್ರಿ ಸೆಲ್ಸಿಯಸ್​​​ ಬಿಸಿ ಮಾಡಲಾಗುತ್ತದೆ. ಕೊಲೊರಿಮೆಟ್ರಿಕ್ ರೀಡಿಂಗ್ ಬಳಿಕ ರೋಗಿಗೆ ಕೊರೊನಾ ವೈರಸ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.

test
test

By

Published : May 28, 2020, 3:17 PM IST

ಪ್ಯಾರಿಸ್ (ಫ್ರಾನ್ಸ್): ಕೋವಿಡ್-19 ಪತ್ತೆಗಾಗಿ ಲಾಲಾರಸ ಆಧಾರಿತ ಸ್ಕ್ರೀನಿಂಗ್ ಪರೀಕ್ಷೆಯಾದ 'ಈಸಿಕಾವ್'‌ನ ಉತ್ಪಾದನೆ ಪ್ರಾರಂಭಿಸುವುದಾಗಿ ಫ್ರೆಂಚ್ ಒಕ್ಕೂಟ ಪ್ರಕಟಿಸಿದೆ.

ಲಾಲಾರಸ ಆಧಾರಿತ ಪರೀಕ್ಷೆಯಲ್ಲಿ ಒಂದು ಗಂಟೆಯೊಳಗೆ ಕೊಲೊರಿಮೆಟ್ರಿಕ್ ರೀಡಿಂಗ್ ಮೂಲಕ ವೈರಸ್​​ ಪತ್ತೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿಯ ನಾಲಿಗೆಯಿಂದ 1 ಮಿಲಿಗಿಂತ ಕಡಿಮೆ ಲಾಲಾರಸವನ್ನು ಸಂಗ್ರಹಿಸುತ್ತಾರೆ. ನಂತರ ಮಾದರಿಯನ್ನು ಎರಡು ಟ್ಯೂಬ್‌ಗಳಲ್ಲಿ 65 ಡಿಗ್ರಿ ಸೆಲ್ಸಿಯಸ್​​​ ಬಿಸಿ ಮಾಡಲಾಗುತ್ತದೆ. ಕೊಲೊರಿಮೆಟ್ರಿಕ್ ರೀಡಿಂಗ್ ಬಳಿಕ ರೋಗಿಗೆ ಕೊರೊನಾ ವೈರಸ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.

"ಈಸಿಕೋವ್ ಒಂದು ಆವಿಷ್ಕಾರವಾಗಿದ್ದು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಶಕ್ತಿಯಾಗಲಿದೆ" ಎಂದು ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಫ್ರಾಂಕ್ ಮೊಲಿನಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details