ನವದೆಹಲಿ:ಭಾರತಕ್ಕೆ 8 ಹೆಚ್ಚು ಸಾಮರ್ಥ್ಯದ ಆಮ್ಲಜನಕ ಉತ್ಪಾದಕಗಳು, 2,000 ರೋಗಿಗಳಿಗೆ ಐದು ದಿನಗಳವರೆಗೆ ಸಾಕಾಗುವಷ್ಟು ದ್ರವ ಆಮ್ಲಜನಕ ಜೊತೆಗೆ 28 ವೆಂಟಿಲೇಟರ್‌ಗಳು ಮತ್ತು ಐಸಿಯುಗಳಿಗೆ ಉಪಕರಣಗಳನ್ನು ಒದಗಿಸುವುದಾಗಿ ಫ್ರಾನ್ಸ್ ತಿಳಿಸಿದೆ.
"ಮುಂದಿನ ಕೆಲ ದಿನಗಳಲ್ಲಿ, ಫ್ರಾನ್ಸ್ ಭಾರತಕ್ಕೆ ತಕ್ಷಣದ ಪರಿಹಾರ ಮಾತ್ರವಲ್ಲದೆ ದೀರ್ಘ ಪರಿಹಾರವನ್ನೂ ಒದಗಿಸಲಿದೆ. 250 ಬೆಡ್ಗಳಿಗೆ ಒಂದು ವರ್ಷದವರೆಗೆ ಆಮ್ಲಜನಕ ಪೂರೈಸುವ 8 ಹೆಚ್ಚು ಸಾಮರ್ಥ್ಯದ ಆಮ್ಲಜನಕ ಉತ್ಪಾದಕಗಳು, 2,000 ರೋಗಿಗಳಿಗೆ 5 ದಿನಗಳವರೆಗೆ ದ್ರವ ಆಮ್ಲಜನಕ ಪೂರೈಸಬಲ್ಲ 28 ವೆಂಟಿಲೇಟರ್‌ಗಳು ಮತ್ತು ಐಸಿಯು ಉಪಕರಣಗಳನ್ನು ನೀಡಲಿದೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಟ್ವೀಟ್ ಮಾಡಿದ್ದಾರೆ.