ಪ್ಯಾರಿಸ್( ಫ್ರಾನ್ಸ್):ಫ್ರಾನ್ಸ್ನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ನಿನ್ನೆ ಒಂದೇ ದಿನ 501,635 ಪ್ರಕರಣಗಳು ದಾಖಲಾಗಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಘೋಷಿಸಿದೆ.
ಭಾರಿ ಪ್ರಮಾಣದಲ್ಲಿ ಸೋಂಕು ಏರಿಕೆ ಕಂಡು ಬಂದಿದೆ. ಆದರೆ ತುರ್ತು ನಿಗಾಘಟಕಕ್ಕೆ ಸೇರ್ಪಡೆ ಆಗುವವರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸುಮಾರು 3741 ಜನ ಇನ್ಸೆಂಟಿವ್ ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕಳೆದ 24 ಗಂಟೆಯಲ್ಲಿ 364 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ ಸುಮಾರು 1,02,086 ಮಂದಿ ಸಾವನ್ನಪ್ಪಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಫ್ರಾನ್ಸ್ ಜನತೆ ಸಾರ್ವಜನಿಕವಾಗಿ ಓಡಾಡಬೇಕಾದರೆ, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬೇಕಾದರೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಈ ಬಗ್ಗೆ ಪ್ರಮಾಣಪತ್ರವನ್ನ(ಪಾಸ್) ಪಡೆದಿರಬೇಕು. ಇಲ್ಲದಿದ್ದರೆ ಅಂತಹವರಿಗೆ ಪ್ರವೇಶ ನಿಷೇದ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ನಿನ್ನೆಯಿಂದಲೇ ಫ್ರಾನ್ಸ್ನಲ್ಲಿ ಜಾರಿಗೆ ಬಂದಿದೆ. 16 ವರ್ಷ ಮೇಲ್ಪಟ್ಟವರಿಗೆ ಈ ನಿಯಮ ಅನ್ವಯಿಸಲಿದೆ.
ಫೆಬ್ರವರಿ 15 ರೊಳಗೆ ಯಾರು ಬೂಸ್ಟರ್ ಡೋಸ್ ಪಡೆಯದೇ ಇದ್ದರೆ ಸುಮಾರು 90 ಲಕ್ಷ ಮಂದಿ ಸಾರ್ವಜನಿಕವಾಗಿ ಓಡಾಡಲು ಪಡೆದಿರುವ ಪಾಸ್ ಅನುಮತಿಯನ್ನ ಕಳೆದುಕೊಳ್ಳಲಿದ್ದಾರೆ.ಹಾಗಾಗಿ ಇವರೆಲ್ಲ ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೆಯಲೇಬೇಕು ಎಂದು ಫ್ರಾನ್ಸ್ ಆರೋಗ್ಯ ಸಚಿವ ಒಲಿವರ್ ವೆರನ್ ಹೇಳಿದ್ದಾರೆ. 2ನೇ ಡೋಸ್ ಪಡೆದ ನಾಲ್ಕು ತಿಂಗಳ ಒಳಗೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕಿದೆ.
ಇದನ್ನೂ ಓದಿ:'ಸ್ಟುಪಿಡ್ ಸನ್ ಆಫ್ ಎ..' ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್