ಕರ್ನಾಟಕ

karnataka

ETV Bharat / international

ಮಹಾಮಾರಿ ಕೊರೊನಾಗೆ ಫ್ರಾನ್ಸ್‌ನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಬಲಿ - ಮಹಾಮಾರಿ ಕೊರೊನಾಗೆ 1 ಲಕ್ಷಕ್ಕೂ ಅಧಿಕ ಮಂದಿ ಬಲಿ

ವಿಶ್ವದೆಲ್ಲೆಡೆ ದಿನದಿಂದ ದಿನಕ್ಕೆ ಹೊಸ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಫ್ರಾನ್ಸ್‌ನಲ್ಲಿ ಇಲ್ಲಿಯವರೆಗೆ 1 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

corona
corona

By

Published : Apr 16, 2021, 11:34 AM IST

ಪ್ಯಾರಿಸ್: ಫ್ರಾನ್ಸ್ ದೇಶದಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ವೇಗವಾಗಿ ಏರುತ್ತಿದೆ. ಇದುವರೆಗೆ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಮಹಾಮಾರಿಯಿಂದ ಅತಿ ಹೆಚ್ಚು ಸಾವು ಕಂಡ ಜಗತ್ತಿನ ದೇಶಗಳ ಪೈಕಿ ಫ್ರಾನ್ಸ್ 3ನೇ ಸ್ಥಾನದಲ್ಲಿದೆ.

ಯುಕೆ ಮತ್ತು ಇಟಲಿಯಲ್ಲೂ ಹೊಸ ರೂಪಾಂತರ ಕೊರೊನಾ​ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಟ್ವೀಟ್​ ಮೂಲಕ ಬೇಸರ ವ್ಯಕ್ತಡಿಸಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದೇಶದಲ್ಲಿ 1 ಲಕ್ಷ ಜನ ವೈರಸ್‌ಗೆ ಬಲಿಯಾಗಿದ್ದಾರೆ. ಈ ವೈರಸ್​ ತುಂಬಾ ಕ್ರೂರಿ, ಕೊನೆಯ ಕ್ಷಣಗಳಲ್ಲಿ ನಮ್ಮ ತಂದೆ, ತಾಯಿ, ಪ್ರೀತಿಪಾತ್ರರು, ಸ್ನೇಹಿತರ ಜೊತೆ ಕಾಲ ಕಳೆಯುವುದನ್ನೂ ಕಿತ್ತುಕೊಂಡಿದೆ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಗುರುವಾರ ಫ್ರಾನ್ಸ್​ನಲ್ಲಿ 300 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 100,077 ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details