ಪ್ಯಾರಿಸ್ :ಅಮೆರಿಕದ ಸರ್ಚ್ ಇಂಜಿನ್ ದೈತ್ಯ ಗೂಗಲ್ಗೆ ಫ್ರಾನ್ಸ್ 150 ಮಿಲಿಯನ್ ಯುರೋ (ಸುಮಾರು 1182 ಕೋಟಿ) ದಂಡ ವಿಧಿಸಿದೆ.
‘ಗೂಗಲ್ ಜಾಹೀರಾತುಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟವಾಗುತ್ತೆ’ ಎಂದು ಕಂಪನಿಯೊಂದು ಎತ್ತಿ ಹಿಡಿದಿತ್ತು. ಜಾಹೀರಾತು ವಿಷಯದಲ್ಲಿ ಅನುಮಾನವಾಗಿ, ಏಕಪಕ್ಷಿಯವಾಗಿ ಗೂಗಲ್ ವ್ಯವಹರಿಸುತ್ತಿದೆಂದು ಫ್ರಾನ್ಸ್ ಕಾಂಪಿಟೇಷನ್ ಅಥಾರಿಟಿ ಆರೋಪ ಮಾಡಿದೆ.
ಜಾಹೀರಾತುಗಳನ್ನು ಹೇಗೆ ಉಪಯೋಗಿಸುತ್ತೆ?, ಖಾತೆಗಳನ್ನು ನಿಲ್ಲಿಸುವುದಕ್ಕೆ ಯಾವ ವಿಧಾನಗಳು ಪಾಲಿಸುತ್ತೆಂಬುದು ತಿಳಿಸಬೇಕೆಂದು ಗೂಗಲ್ಗೆ ಆದೇಶಿಸಲಾಗಿದೆ.
ಫ್ರಾನ್ಸ್ ವಿಧಿಸಿರುವ ದಂಡದ ಬಗ್ಗೆ ಮನವಿ ಸಲ್ಲಿಸಲಾಗುವುದು. ಗೂಗಲ್ ಜಾಹೀರಾತುವಿನ ನಿಬಂಧನೆಗಳು ಕಳ್ಳತನ, ಅಸಭ್ಯ ಪ್ರಕರಣಗಳಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ರೂಪಿಸಲಾಗಿದೆ ಅಂತಾ ಗೂಗಲ್ ಸ್ಪಷ್ಟಪಡಿಸಿದೆ.
ಈ ಹಿಂದೆ ಐರೋಪ್ಯ ಒಕ್ಕೂಟದ ‘ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ’ವನ್ನು ಮೊದಲ ಬಾರಿಗೆ ಬಳಿಸಿ ಗೂಗಲ್ಗೆ 50 ಮಿಲಿಯನ್ ಯುರೋ ದಂಡವನ್ನು ಫ್ರಾನ್ಸ್ ವಿಧಿಸಿತ್ತು