ಪ್ಯಾರಿಸ್ (ಫ್ರಾನ್ಸ್):ರೂಪಾಂತರಗೊಂಡ ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಯೂರೋಪಿನ ಹಲವು ರಾಷ್ಟ್ರಗಳು ತಮ್ಮದೇ ಆದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರಿಂದಾಗಿ ಇಂಗ್ಲೆಂಡಿನೊಂದಿಗೆ ಕೆಲವು ವ್ಯಾಪಾರ ಸಂಬಂಧಗಳನ್ನು ಕೂಡಾ ಹಲವು ರಾಷ್ಟ್ರಗಳು ಕಡಿದು ಕೊಂಡಿವೆ.
ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಫ್ರಾನ್ಸ್ ಎಲ್ಲ ರೀತಿಯ ಸಾರಿಗೆ ಮಾರ್ಗಗಳನ್ನು ಇಂಗ್ಲೆಂಡ್ನೊಂದಿಗೆ ಸ್ಥಗಿತಗೊಳಿಸಿದೆ. ಇದರಲ್ಲಿ ಡೋವರ್ ಇಂಗ್ಲೆಂಡ್ ದಕ್ಷಿಣ ಕರಾವಳಿಯಿಂದ ಇಂಗ್ಲಿಷ್ ಕಾಲುವೆಯ ಸುರಂಗದ ಮೂಲಕ ಫ್ರಾನ್ಸ್ಗೆ ಸಾಗಾಟವಗುತ್ತಿದ್ದ ಟ್ರಕ್ಗಳೂ ಕೂಡಾ ಸೇರಿವೆ. ಸುಮಾರು 48 ಗಂಟೆಗಳ ಕಾಲ ಇವುಗಳಿಗೆ ನಿಷೇಧ ಹೇರಲಾಗುತ್ತದೆ.
ಸಾರಿಗೆಯನ್ನು ನಿರ್ಬಂಧಿಸಿರುವ ಈ ವೇಳೆ ರೂಪಾಂತರಗೊಂಡ ಕೊರೊನಾ ವೈರಸ್ ಅನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದು ಸಾಮಾನ್ಯ ನಿಯಮ ಎಂದು ಫ್ರೆಂಚ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈಗಾಗಲೇ ಸಾಗಾಟವಾಗುತ್ತಿರುವ ಸರಕುಗಳನ್ನು ಹೊಂದಿರುವ ಟ್ರಕ್ಗಳ ಚಾಲಕರಿಗೆ ಈ ನಿರ್ಧಾರದಿಂದ ಗೊಂದಲವಾಗಿದೆ.