ಕರ್ನಾಟಕ

karnataka

ETV Bharat / international

ಉಯ್ಘರ್‌ ಮುಸ್ಲಿಮರ ಮೇಲೆ ಚೀನಾ ಸರ್ಕಾರದ ದೌರ್ಜನ್ಯ.. ಮಾಜಿ ಪೊಲೀಸ್ ಅಧಿಕಾರಿ ಬಾಯ್ಬಿಟ್ಟ ಸತ್ಯ - ಉಯ್ಘರ್ ಮುಸ್ಲಿಮರ

ಉಯ್ಘರ್ ಮುಸ್ಲಿಮರಿಗಾಗಿ ಮರು ಶಿಕ್ಷಣ ಶಿಬಿರಗಳನ್ನ ಸ್ಥಾಪಿಸಲಾಗಿತ್ತು. ಆದರೆ, ಈ ಶಿಬಿರಗಳು ಸೈದ್ಧಾಂತಿಕ ಭಿನ್ನತೆ ಹಾಗೂ ರಾಜಕೀಯವಾಗಿ ಅವರನ್ನು ತಿದ್ದುವ ಕಾರ್ಯ ಮಾಡುವ ಕೇಂದ್ರದಂತಿದ್ದವು. ಇದೊಂದು ಮರು ಶಿಕ್ಷಣ ಶಿಬಿರ ಹೆಸರಿನಲ್ಲಿರುವ ಪರಿವರ್ತನಾ ಕೇಂದ್ರವಿದ್ದಂತೆ ಎಂದಿದ್ದಾರೆ..

former-chinese-policeman-reveals-chilling-account-of-uyghurs-in-chinas-xinjiang-province
ಉಯ್ಘರ್ ಮುಸ್ಲಿಮರ ಮೇಲೆ ಚೀನಾ ಸರ್ಕಾರದ ದೌರ್ಜನ್ಯ

By

Published : Jun 8, 2021, 7:24 PM IST

ಲಂಡನ್ :ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಹೆಚ್ಚಾಗಿರುವ ಉಯ್ಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಚೀನಾದ ಮಾಜಿ ಪೊಲೀಸ್ ಆಧಿಕಾರಿಯೊಬ್ಬ ಆಘಾತಕಾರಿ ವಿಚಾರಗಳ ಕುರಿತು ನ್ಯಾಯಮಂಡಳಿಯ ಮುಂದೆ ಹೇಳಿಕೆ ನೀಡಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಯ್ಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ಸುದ್ದಿಯಾಗಿತ್ತಲ್ಲದೆ, ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರಲ್ಲದೆ ಪ್ರತಿಭಟನೆ ನಡೆದಿತ್ತು.

ಈ ವೇಳೆ ಹಲವರ ಮೇಲೆ ಹಲ್ಲೆ ಹಾಗೂ ನೂರಾರು ಜನರನ್ನ ಬಂಧಿಸಲಾಗಿತ್ತು. ವಾಯವ್ಯ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿ ಮಾಜಿ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನ ದಾಖಲಿಸಲಾಗಿದೆ.

ಅಲ್ಪಸಂಖ್ಯಾತರ ವಿರುದ್ಧ ಚೀನಾ ಸರ್ಕಾರ ಯಾವ ರೀತಿಯ ಕಾರ್ಯಾಚರಣೆಗೆ ಮುಂದಾಗಿದೆ ಎಂಬುದನ್ನು ನ್ಯಾಯಮಂಡಳಿಯ ಮುಂದೆ ಬಿಚ್ಚಿಟ್ಟಿದ್ದಾರೆ. ಈಗ ಜರ್ಮನಿಯಲ್ಲಿ ನೆಲೆಸಿರುವ ಮಾಜಿ ಪೊಲೀಸ್ ಅಧಿಕಾರಿ 2018ರಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ ದಿನದ ಮಾಹಿತಿ ನೀಡಿದ್ದಾರೆ.

ಉಯ್ಘರ್ ಮುಸ್ಲಿಮರಿಗಾಗಿ ಮರು ಶಿಕ್ಷಣ ಶಿಬಿರಗಳನ್ನ ಸ್ಥಾಪಿಸಲಾಗಿತ್ತು. ಆದರೆ, ಈ ಶಿಬಿರಗಳು ಸೈದ್ಧಾಂತಿಕ ಭಿನ್ನತೆ ಹಾಗೂ ರಾಜಕೀಯವಾಗಿ ಅವರನ್ನು ತಿದ್ದುವ ಕಾರ್ಯ ಮಾಡುವ ಕೇಂದ್ರದಂತಿದ್ದವು. ಇದೊಂದು ಮರು ಶಿಕ್ಷಣ ಶಿಬಿರ ಹೆಸರಿನಲ್ಲಿರುವ ಪರಿವರ್ತನಾ ಕೇಂದ್ರವಿದ್ದಂತೆ ಎಂದಿದ್ದಾರೆ.

ಈ ದೊಡ್ಡ ಶಿಬಿರಗಳಲ್ಲಿ ಬಂಧನವಾಗಿರುವವರು ಉಯ್ಘರ್​​ನ ಅಲ್ಪಸಂಖ್ಯಾತ ಸಮುದಾಯ ಎಂಬುದು ನನಗೆ ಅನಿಸಿತ್ತು. ಆದರೆ, ಈ ಶಿಬಿರಗಳು ಶಿಕ್ಷಣ ಅಥವಾ ಬೇರೆ ಯಾವುದೇ ತರಬೇತಿ ನೀಡುವ ಬದಲು ಕೈದಿಗಳ ಮನಸ್ಸನ್ನೇ ಬದಲಾಯಿಸುವ ಕೇಂದ್ರವಾದವು ಎಂದಿದ್ದಾರೆ.

ಉಯ್ಘರ್​​ ಕೈದಿಗಳ ಮೇಲೆ ಬಲವಂತವಾಗಿ ದಾಳಿ ಮಾಡಬೇಕಾಯಿತು. ಅವರ ಉಸಿರುಗಟ್ಟಿಸುಲು ಪ್ಲಾಸ್ಟಿಕ್ ಚೀಲವನ್ನು ಅವರ ತಲೆಯ ಮೇಲೆ ಕಟ್ಟಲಾಗುತ್ತದೆ ಮತ್ತು ಅವರು ಉಸಿರಾಡಲು ಹೆಣಗಾಡಲಾರಂಭಿಸಿದಾಗ ಮಾತ್ರ ಚೀಲವನ್ನು ತೆಗೆಯಲಾಗುತ್ತದೆ. ಕೆಲವೊಮ್ಮೆ, ಅವರ ಕೈಕಾಲುಗಳನ್ನು ಕಟ್ಟಲಾಗಿತ್ತು. ಅಲ್ಲದೆ ಅವರು ಮಾಡದ ಅಪರಾಧಗಳ ಒಪ್ಪಿಕೊಳ್ಳುವಂತೆಯೂ ಒತ್ತಾಯಿಸಲಾಗುತ್ತಿತ್ತು ಎಂದು ನ್ಯಾಯಮಂಡಳಿಗೆ ತಿಳಿಸಿದ್ದಾರೆ.

ABOUT THE AUTHOR

...view details