ನವದೆಹಲಿ: ಕೊರೊನಾ ಎರಡನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ವಿದೇಶಗಳು ಉದಾರ ನೆರವು ನೀಡುತ್ತಿವೆ. ಇದೀಗ ವೈದ್ಯಕೀಯ ಉಪಕರಣಗಳನ್ನು ಹೊತ್ತು ಸ್ವಿಟ್ಜರ್ಲ್ಯಾಂಡ್, ನೆದರ್‌ಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದ ವಿಮಾನಗಳು ದೆಹಲಿಗೆ ಬಂದಿಳಿದಿವೆ.
ನೆದರ್‌ಲ್ಯಾಂಡ್ ದೇಶವು 449 ವೆಂಟಿಲೇಟರ್‌ಗಳು, 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ.
ಸ್ವಿಟ್ಜರ್ಲ್ಯಾಂಡ್ 600 ಆಮ್ಲಜನಕ ಸಾಂದ್ರಕಗಳು, 50 ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ದಕ್ಷಿಣ ಕೊರಿಯಾದಿಂದ 200 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ವಿಮಾನ ದೆಹಲಿ ನಿಲ್ದಾಣಕ್ಕೆ ಆಗಮಿಸಿದೆ.
ಯುಕೆ, ರಷ್ಯಾ, ಮತ್ತು ಯುಎಸ್ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳು ಭಾರತಕ್ಕೆ ಆರೋಗ್ಯ ಮೂಲಸೌಕರ್ಯ ಅಗತ್ಯತೆಗಳ ಪೂರೈಕೆ ಮಾಡಿವೆ. ಅಷ್ಟೇ ಅಲ್ಲದೆ, ಬೆಂಬಲವನ್ನು ಮುಂದುವರೆಸುತ್ತೇವೆ ಎಂಬ ಭರವಸೆಯನ್ನೂ ನೀಡಿವೆ.