ಬ್ಯಾಂಕಾಕ್:ಕೊರೊನಾ ವೈರಸ್ ಇದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಥಾಯ್ಲೆಂಡ್ನಲ್ಲಿ ಆರೋಗ್ಯ ಸಚಿವರು ಹೇಳಿದ್ದಾರೆ.
ಚೀನಾದ ಪ್ರವಾಸಿಗರನ್ನು ಕರೆದೊಯ್ಯುವ 50 ವರ್ಷದ ಟ್ಯಾಕ್ಸಿ ಚಾಲಕ,ಥಾಯ್ಲೆಂಡ್ನಲ್ಲಿ ಗುಣಮುಖವಾಗಿದ್ದಾರೆ. ಒಟ್ಟಾರೆ ಒಂಬತ್ತು ಜನರಲ್ಲಿ ಈ ರೋಗ ಕಂಡು ಬಂದಿತ್ತು.
ಉಳಿದ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸದ್ಯದಲ್ಲಿಯೇ ಗುಣಮುಖರಾಗುತ್ತಾರೆ ಎಂದು ಥಾಯ್ಲೆಂಡ್ನ ಸಾರ್ವಜನಿಕ ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟ್ಯಾಕ್ಸಿ ಚಾಲಕನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಂಬಂಧಿಕರು ಮತ್ತು ಜನರು ಸೋಂಕಿಗೆ ಒಳಗಾಗಲಿಲ್ಲ ಎಂದು ದೃಢಪಡಿಸಿದ್ದಾರೆ.
ಈ ನಡುವೆ ಥಾಯ್ಲೆಂಡಿನ 138 ಜನರನ್ನು ಚೀನಾದ ವುಹಾನ್ ನಗರದಿಂದ ಕರೆತರಲಾಗಿದೆ. ಇವರೆಲ್ಲರೂ ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ಉಪಸಾರ್ವಜನಿಕ ಆರೋಗ್ಯ ಸಚಿವ ಪಿಟೆಚಾ ಹೇಳಿದ್ದಾರೆ.