ಕರ್ನಾಟಕ

karnataka

ETV Bharat / international

ಕಝಕಿಸ್ತಾನ್​ದಲ್ಲಿ ನಾಗರಿಕ ವಿಮಾನಗಳ ಹಾರಾಟ ಪುನಾರಂಭ - ಕಝಕ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕಝಕಿಸ್ತಾನ್​ದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾದ ನಂತರ ಇಂದು ಮೊದಲ ನಾಗರಿಕ ವಿಮಾನವು ಅಲ್ಮಾಟಿ ನಿಲ್ದಾಣದಲ್ಲಿ ಲ್ಯಾಂಡ್​ ಆಗಿದೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಝಾಕಿಸ್ತಾನ್
ಕಝಾಕಿಸ್ತಾನ್

By

Published : Jan 13, 2022, 12:15 PM IST

ಅಲ್ಮಾಟಿ: ಕಝಕ್ ನಗರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾದ ಹಿನ್ನೆಲೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಇಂದು ಮೊದಲ ನಾಗರಿಕ ವಿಮಾನವು ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಕಝಕಿಸ್ತಾನ್ 2022 ರ ಆರಂಭಿಕ ದಿನಗಳಲ್ಲಿ ಸಾಮೂಹಿಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಗ್ಯಾಸ್ ಬೆಲೆ ಹೆಚ್ಚಳದ ಕುರಿತು ದೇಶದಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಿಂದ ಪರಿಸ್ಥಿತಿ ಹದಗೆಟ್ಟಿತ್ತು. ಉಗ್ರಗಾಮಿಗಳು ರಾಜ್ಯ ಸಂಸ್ಥೆಗಳ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ, ನಾಗರಿಕ ವಿಮಾನಗಳ ಹಾರಾಟವನ್ನು ನಿಷೇಧಿಸಿ, ಮಿಲಿಟರಿ ವಿಮಾನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಅಲ್ಮಾಟಿ ವಿಮಾನ ನಿಲ್ದಾಣವು ಜನವರಿ 13 ರಂದು ಕಾರ್ಯಾಚರಣೆ ಪುನರಾರಂಭಿಸಲಿದೆ ಎಂದು ಕಝಕಿಸ್ತಾನದ ನಾಗರಿಕ ವಿಮಾನಯಾನ ಸಮಿತಿ ಈ ಹಿಂದೆ ಹೇಳಿತ್ತು. ಅದರಂತೆ ಇಂದಿನಿಂದ ನಾಗರಿಕ ವಿಮಾನಗಳ ಹಾರಾಟ ಪ್ರಾರಂಭವಾಗಿದೆ.

ಓದಿ:ವಿಯೆಟ್ನಾಂ ಕಾರ್ಮಿಕರ ಮೇಲೆ ಚೀನಾ ಸೈನಿಕರಿಂದ ಕಲ್ಲು ತೂರಾಟ!: ಮದ್ಯ ಸೇವಿಸಿದ್ದಾರೆಯೇ? ಎಂದು ಟ್ವಿಟ್ಟರ್​ನಲ್ಲಿ​ ಪ್ರಶ್ನೆ​

ABOUT THE AUTHOR

...view details