ಜಿನಿವಾ:ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿಕೆ ವಿಶೇಷವಾಗಿ ಪಾಕಿಸ್ತಾನ ಕೃಪಾಪೋಷಿತ ಉಗ್ರ ಚಟುವಟಿಕೆಗಳ ಬಗ್ಗೆ ಯುರೋಪಿಯನ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಯುರೋಪಿಯನ್ ಫೌಂಡೇಷನ್ ಫಾರ್ ಸೌತ್ ಏಷ್ಯಾ ಸ್ಟಡಿಸ್ (ಇಎಫ್ಎಸ್ಎಎಸ್) ಆಯೋಜಿಸಿದ್ದ 'ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಹಣ'ದ ನೆರವು ವಿಷಯದ ಕುರಿತು ತಜ್ಞರು ತಮ್ಮ ಅಧ್ಯಯನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೆನ್ರಿ ಜಾಕ್ಸನ್ ಸೊಸೈಟಿಯ ಸಂಶೋಧನಾ ತಜ್ಞ ಪೌಲ್ ಸ್ಕಾಟ್ ಅವರ ನೇತೃತ್ವದಲ್ಲಿ, ದಕ್ಷಿಣ ಏಷ್ಯಾದ ಎಷ್ಟು ರಾಷ್ಟ್ರಗಳು ಮುಖ್ಯವಾಗಿ ಪಾಕಿಸ್ತಾನ ಉಗ್ರರಿಗೆ ಹಣದ ನೆರವು ನೀಡಿ ಭಾರತ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲವಾಗಿದೆ ಎಂಬುದನ್ನು ಅಧ್ಯಯನ ನಡೆಸಿ ತಿಳಿಸಿದೆ.