ಕರ್ನಾಟಕ

karnataka

By

Published : Oct 3, 2021, 7:26 AM IST

ETV Bharat / international

ಇದು ಸೂರ್ಯನ ಸಮೀಪದ ಬುಧ ಗ್ರಹ: ಉಡ್ಡಯನದ 3 ವರ್ಷಗಳ ಬಳಿಕ ಬಾಹ್ಯಾಕಾಶ ನೌಕೆ ಕಳುಹಿಸಿದ ಚಿತ್ರ

ಯುರೋಪ್-ಜಪಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿದ್ದ ಬಾಹ್ಯಾಕಾಶ ನೌಕೆಯು ಸೂರ್ಯನ ಸಮೀಪಕ್ಕೆ ಇರುವ ಬುಧ ಗ್ರಹದ ಕುರಿತ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ.

Mercury
Mercury

ಪ್ಯಾರಿಸ್: ಯುರೋಪ್​-ಜಪಾನ್ ಜೊತೆಯಾಗಿ ಅಭಿವೃದ್ಧಿಪಡಿಸಿರುವ​ ಬೆಪಿಕೊಲೊಂಬೊ ಬಾಹ್ಯಾಕಾಶ ನೌಕೆ ಸೂರ್ಯನ ಸಮೀಪವಿರುವ ಬುಧ ಗ್ರಹದ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ.

ಏರಿಯನ್‌-5 ರಾಕೆಟ್‌ ಮೂಲಕ ಮಾನವರಹಿತ ಉಪಗ್ರಹವನ್ನು ಉಡಾಯಿಸಿದ ಸುಮಾರು ಮೂರು ವರ್ಷಗಳ ನಂತರ ಈ ಚಿತ್ರಗಳನ್ನು ಪಡೆಯಲಾಗಿದೆ. ಬಾಹ್ಯಾಕಾಶ ನೌಕೆಗೆ ಜೋಡಿಸಲಾದ ಕ್ಯಾಮೆರಾಗಳು ಕಪ್ಪು-ಬಿಳುಪು ಬಣ್ಣದ ಚಿತ್ರಗಳನ್ನು ಒದಗಿಸಿದೆ ಎಂದು ಸಂಸ್ಥೆ ತಿಳಿಸಿದೆ.

'ನಾವು ಮೊದಲ ಚಿತ್ರಗಳನ್ನು ತರುವಲ್ಲಿ ಸ್ವಲ್ಪ ತಡವಾಗಿರಬಹುದು, ಆದರೆ ಬುಧ ಗ್ರಹದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ' ಎಂದು ಬೆಪಿಕೊಲೊಂಬೊ ಟ್ವೀಟ್ ಮೂಲಕ ತಿಳಿಸಿದೆ.

ABOUT THE AUTHOR

...view details