ಸ್ಟಾಕ್ಹೋಮ್(ಸ್ವೀಡನ್):ಯುನೈಟೆಡ್ ಕಿಂಗ್ಡಮ್(ಇಂಗ್ಲೆಂಡ್) ಯುರೋಪಿಯನ್ ಯೂನಿಯನ್ನಿಂದ ಹೊರ ಬಂದಿದೆ. ಈ ಮೊದಲು ಬ್ರಿಟನ್ 600 ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಂಡಿತ್ತು. ಆ ಎಲ್ಲ ಒಪ್ಪಂದಗಳ ಅವಧಿ ಈ ವರ್ಷದ ಅಂತ್ಯದಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಈ ಎಲ್ಲ ಒಪ್ಪಂದಗಳನ್ನು ಮತ್ತೊಮ್ಮೆ ಮಾಡಿಕೊಳ್ಳಬೇಕಾದ ತುರ್ತು ಅವಶ್ಯಕತೆ ಯುರೋಪಿಯನ್ ಯೂನಿಯನ್ಗೆ ಇದೆ ಎಂದು ಬ್ರೆಕ್ಸಿಟ್ ಸಮಾಲೋಚಕ ಮೈಕೆಲ್ ಬಾರ್ನಿಯರ್ ಹೇಳಿದ್ದಾರೆ.
ಇಂಗ್ಲೆಂಡ್ ಕಳೆದ 60 ವರ್ಷಗಳಿಂದ ಯೂರೋಪಿನ 28 ರಾಷ್ಟ್ರಗಳನ್ನೊಳಗೊಂಡ ಯೂನಿಯನ್ನ ಸದಸ್ಯ ರಾಷ್ಟ್ರವಾಗಿತ್ತು. ಆದರೆ ಬ್ರಿಟನ್ 2016ರಲ್ಲಿ ಜನಾಭ್ರಿಪಾಯದ ಪ್ರಕಾರ ಯುರೋಪಿಯನ್ ಯೂನಿಯನ್ನಿಂದ ಹೊರ ಬಂದಿತ್ತು.
ಬ್ರಿಟನ್ ಇಯುನಿಂದ ಹೊರಹೊದ ಬಗ್ಗೆ ಮಾತನಾಡಿದ ಬಾರ್ನಿಯರ್, ನಮಗೆ ಈಗಾಗಲೇ ಕಡಿಮೆ ಅವಧಿಯಿದ್ದು, ಅಷ್ಟರೊಳಗೆ ಕೆಲವು ಪ್ರಮುಖ ಒಪ್ಪಂದಗಳನ್ನು ಪುನಃ ಮರು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.